ಹೆಚ್ಚುತ್ತಿರುವ ಕೋವಿಡ್: ಭಾರತ ಭೇಟಿಯ ಅವಧಿ ಮೊಟಕುಗೊಳಿಸಲಿರುವ ಬೊರಿಸ್ ಜಾನ್ಸನ್
ಲಂಡನ್, ಎ. 14: ಭಾರತದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಈ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ತನ್ನ ಪ್ರವಾಸದ ಅವಧಿಯನ್ನು ಮೊಟಕುಗೊಳಿಸಲಿದ್ದಾರೆ ಎಂದು ಅವರ ವಕ್ತಾರರೊಬ್ಬರು ತಿಳಿಸಿದ್ದಾರೆ.
ಅವರು ಎಪ್ರಿಲ್ 26ರಂದು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ. ಅವರ ಹೆಚ್ಚಿನ ಕಾರ್ಯಕ್ರಮಗಳು ಅಂದೇ ಮುಕ್ತಾಯಗೊಳ್ಳಲಿವೆ. ಪ್ರಧಾನಿ ಭೇಟಿಯ ಬಳಿಕ ಅವರು ಬೆಂಗಳೂರು, ಪುಣೆ, ಮುಂಬೈ ಮತ್ತು ಚೆನ್ನೈಗೆ ಭೇಟಿ ನೀಡುವ ಕಾರ್ಯಕ್ರಮಗಳಿದ್ದವು. ಅವುಗಳನ್ನು ಈಗ ರದ್ದುಪಡಿಸಲಾಗಿದೆ.
Next Story