ರೆಮಿಡಿಸ್ವಿರ್ ಔಷಧ ಪೂರೈಕೆ ಹೊಣೆಗಾರಿಕೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ: ಸಚಿವ ಡಾ.ಸುಧಾಕರ್
ಬೆಂಗಳೂರು, ಎ.15: ಕೋವಿಡ್-19 ತಡೆಗಟ್ಟಲು ನೀಡುವ ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(ಎಸ್.ಎ.ಎಸ್.ಟಿ) ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರ ಶಿಫಾರಸು ಮಾಡಿರುವ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕ ರೆಮಿಡಿಸ್ವಿರ್ ಔಷಧ ಸರಬರಾಜು ಮಾಡಲು ಎಸ್.ಎ.ಎಸ್.ಟಿ ಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವಯಂಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ರೆಮಿಡಿಸ್ವಿರ್ ಔಷಧ ಪೂರೈಸಲು ಉಪ ಔಷಧ ನಿಯಂತ್ರಕರಾಗಿರುವ ಕೆಂಪಯ್ಯ ಸುರೇಶ್ ರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಸೋಂಕಿತರ ಎಸ್.ಆರ್.ಎಫ್. ಐಡಿ ಮುಂತಾದ ವಿವರಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಒದಗಿಸಿ ಔಷಧ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ಸ್ವಯಂ ಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ರೆಮಿಡಿಸ್ವಿರ್ ಔಷಧ ಪೂರೈಸಲು ಶ್ರೀ ಕೆಂಪಯ್ಯ ಸುರೇಶ್, ಉಪ ಔಷಧ ನಿಯಂತ್ರಕರರು, ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೋಂಕಿತರ SRF ID ಮುಂತಾದ ವಿವರಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಒದಗಿಸಿ ಔಷಧ ಪಡೆಯಬಹುದು.
— Dr Sudhakar K (@mla_sudhakar) April 15, 2021
2/2