ಭಾರತ-ಪಾಕಿಸ್ತಾನ ನಡುವೆ ಯುಎಇ ಮಧ್ಯಸ್ಥಿಕೆ: ಯುಎಇಯ ಅವೆುರಿಕ ರಾಯಭಾರಿ ಹೇಳಿಕೆ
ದುಬೈ (ಯುಎಇ), ಎ. 15: ಭಾರತ ಮತ್ತು ಪಾಕಿಸ್ತಾನಗಳ ನಡುವೆ ‘ಆರೋಗ್ಯಕರ ಹಾಗೂ ಉಪಯುಕ್ತ’ ಸಂಬಂಧ ಏರ್ಪಡಲು ಸಾಧ್ಯವಾಗುವ ನಿಟ್ಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಧ್ಯಸ್ಥಿಕೆ ವಹಿಸುತ್ತಿದೆ ಎಂದು ಅದರ ಅಮೆರಿಕ ರಾಯಭಾರಿ ಯೂಸುಫ್ ಅಲ್ ಉತೈಬ ಬುಧವಾರ ಹೇಳಿದ್ದಾರೆ.
ಕಾಶ್ಮೀರದಲ್ಲಿನ ಉದ್ವಿಗ್ನತೆಯನ್ನು ತಗ್ಗಿಸುವಲ್ಲಿ ಯುಎಇ ಪಾತ್ರ ವಹಿಸಿತು ಹಾಗೂ ಉಭಯ ದೇಶಗಳ ನಡುವೆ ಯುದ್ಧವಿರಾಮ ಏರ್ಪಡಲು ಸಹಾಯ ಮಾಡಿತು ಎಂದು ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಹೂವರ್ ಇನ್‌ಸ್ಟಿಟ್ಯೂಶನ್‌ನ ವಿದ್ವಾಂಸರೊಂದಿಗೆ ನಡೆದ ಆನ್‌ಲೈನ್ ಸಂವಾದದ ವೇಳೆ ಅವರು ಹೇಳಿದರು.
ಅಂತಿಮವಾಗಿ ಪರಸ್ಪರರ ರಾಜತಾಂತ್ರಿಕರನ್ನು ಹೊಂದುವಷ್ಟು ಆರೋಗ್ಯಕರ ಮಟ್ಟದ ಸಂಬಂಧ ಉಭಯ ದೇಶಗಳ ನಡುವೆ ಏರ್ಪಡಬಹುದಾಗಿದೆ ಎಂದರು.
‘‘ಅವರು ಅತ್ಯುತ್ತಮ ಸ್ನೇಹಿತರಾಗದಿರಬಹುದು. ಆದರೆ, ಒಬ್ಬರಿಗೊಬ್ಬರು ಮಾತನಾಡುವಷ್ಟು ಮಟ್ಟದ ಉಪಯುಕ್ತ ಸಂಬಂಧ ಏರ್ಪಡುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ಯುಎಇಯ ಅಮೆರಿಕ ರಾಯಭಾರಿ ಹೇಳಿದರು.
Next Story