varthabharthi


ನಿಧನ

ನಿವೃತ್ತ ಅಧಿಕಾರಿ, ಹಾಜಿ ಎ.ಸಿ. ಅಬ್ದುಲ್ ಕರೀಂ ನಿಧನ

ವಾರ್ತಾ ಭಾರತಿ : 18 Apr, 2021

ಮಂಗಳೂರು, ಎ.18: ನಿವೃತ್ತ ಆರ್‌ಎಂಎಸ್ ಅಧಿಕಾರಿ ಹಾಜಿ ಎ.ಸಿ ಅಬ್ದುಲ್ ಕರೀಂ (91)ಗುರುವಾರ ರಾತ್ರಿ ಸ್ವಗೃಹವಾದ ಹರೇಕಳ ಪಾವೂರಿನಲ್ಲಿ ನಿಧನರಾದರು.ಮೃತರು ಪತ್ನಿ, 5 ಮಂದಿ ಪುತ್ರರು ಮತ್ತು 3 ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಪಕ್ಕಲಡ್ಕ ಮಸೀದಿಯ ಅಧ್ಯಕ್ಷರಾಗಿ ಹಲವು ಕಾಲ ಸೇವೆ ಸಲ್ಲಿಸಿ ಮಸೀದಿಯ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದ್ದರು.

ಹರೇಕಳ ಪಾವೂರು ಫರೀದ್ ನಗರ ಮಸೀದಿಯ ಗೌರವಾಧ್ಯಕ್ಷರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು.ಫರೀದ್ ನಗರದಲ್ಲಿ ಸುಮಾರು ನಲವತ್ತು ಕುಟುಂಬಕ್ಕೆ ಸರಕಾರದ ಭೂಮಿ ಸಿಗುವಂತಾಗಲು ಕಾನೂನು ಹೋರಾಟ ಮಾಡಿ ಎಲ್ಲರಿಗೂ ಸರಕಾರಿ ಭೂಮಿ ಸಿಗಲು ಕಾರಣಕರ್ತರಾಗಿದ್ದರು. ನ್ಯಾಯ ಪರವಾದ ಎಲ್ಲ ಹೋರಾಟಗಳಲ್ಲಿಯೂ ಅವರು ಮುಂಚೂಣಿಯಲ್ಲಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)