ಪಾಕ್ನಲ್ಲಿ ಕೊರೋನ ಉಲ್ಬಣ
ಇಸ್ಲಾಮಾಬಾದ್,ಎ.18: ಪಾಕಿಸ್ತಾನದಲ್ಲಿ ಕೊರೋನ ಸೋಂಕಿನ ಹಾವಳಿ ಉಲ್ಬಣಿಸಿದ್ದು ರವಿವಾರ ಒಂದೇ ದಿನದಲ್ಲಿ 6,127 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ ಹಾಗೂ 149 ಮಂದಿ ಸಾವನ್ನಪ್ಪಿದ್ದಾರೆ. ಪಾಕ್ನಲ್ಲಿ ಈ ವರ್ಷ ಒಂದೇ ದಿನದಲ್ಲಿ ವರದಿಯಾದ ಕೊರೋನ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 6 ಸಾವಿರವನ್ನು ದಾಟಿರುವುದು ಇದು ಮೊದಲ ಸಲವಾಗಿದೆ.
ಇದರೊಂದಿಗೆ ಪಾಕಿಸ್ತಾನದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 7,56,285ಕ್ಕೇರಿದ್ದು, ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 16,243ನ್ನು ತಲುಪಿದೆ.
Next Story