varthabharthi


ಕ್ರೀಡೆ

ವೀಡಿಯೋ ವೈರಲ್‌

ಅಫ್ಘಾನ್ ಆಟಗಾರರೊಂದಿಗೆ ರಮಝಾನ್ ಉಪವಾಸ ಆಚರಿಸಿದ ವಾರ್ನರ್, ಕೇನ್ ವಿಲಿಯಮ್ಸನ್

ವಾರ್ತಾ ಭಾರತಿ : 19 Apr, 2021

ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರು ತಮ್ಮ ತಂಡದ ಸಹ  ಆಟಗಾರರಾದ ಅಫ್ಗಾನಿಸ್ತಾನದ ರಶೀದ್ ಖಾನ್, ಮುಹಮ್ಮದ್ ನಬಿ ಹಾಗೂ ಮುಜೀಬುರ್ರಹ್ಮಾನ್ ಜತೆಗೂಡಿ ತಮ್ಮ ಮೊದಲ ರಮಝಾನ್ ಉಪವಾಸ ಆಚರಿಸಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ರಶೀದ್ ಖಾನ್, ವಾರ್ನರ್ ಹಾಗೂ ವಿಲಿಯಮ್ಸನ್ ಅವರು ತಮ್ಮೊಂದಿಗೆ ಹೇಗೆ ಉಪವಾಸ ಆಚರಿಸಿದ್ದಾರೆಂದು ವಿವರಿಸಿದ್ದಾರೆ.

ಉಪವಾಸದ ಅನುಭವ ಹೇಗಿತ್ತು ಎಂದು ರಶೀದ್ ಖಾನ್ ಅವರು ವಾರ್ನರ್ ಅವರನ್ನು ಕೇಳುತ್ತಿರುವುದು ವೀಡಿಯೋದಲ್ಲಿ ನೋಡಬಹುದು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ನರ್ "ಗುಡ್, ಆದರೆ ನನಗೆ ಇವತ್ತು ತುಂಬಾ ಬಾಯಾರಿಕೆ ಹಾಗೂ ತುಂಬಾ ಹಸಿವಾಗುತ್ತಿದೆ. ನನ್ನ ಬಾಯಿ ಕೂಡ ಒಣಗಿದೆ" ಎಂದು ಹೇಳುತ್ತಾರೆ.

ವಾರ್ನರ್  ಅವರ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ರಶೀದ್ ನಂತರ ವಿಲಿಯಮ್ಸನ್ ಅವರನ್ನುದ್ದೇಶಿಸಿ ವಾರ್ನರ್ ಅವರಿಗೆ ಕೇಳಿದ ಪ್ರಶ್ನೆಯನ್ನೇ ಕೇಳುತ್ತಾರೆ. ಅದಕ್ಕೆ ವಿಲಿಯಮ್ಸನ್ ಅವರು "ವೆರಿ ಗುಡ್, ಥ್ಯಾಂಕ್ಸ್" ಎಂದು ಹೇಳುತ್ತಾರೆ.

"ಈ ಇಬ್ಬರು ಮಹಾನ್ ಆಟಗಾರರು ಇಂದು ಉಪವಾಸ ಆಚರಿಸುತ್ತಿದ್ದಾರೆ. ಅವರು ಜತೆಯಾಗಿರುವುದು ಖುಷಿ ನೀಡಿದೆ"  ಎಂದು ರಶೀದ್ ನಂತರ ಹೇಳುತ್ತಾರೆ. ಆಗ ವಾರ್ನರ್ "ಬಹಳ ಕಷ್ಟ" ಎಂದು ಹೇಳುತ್ತಾರೆ.

ರಶೀದ್ ಖಾನ್ ಅವರ ತಾಯಿ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ನಿಧನರಾಗಿದ್ದರು. ಇದು ತಾಯಿಯಿಲ್ಲದೆ ತಮ್ಮ ಮೊದಲ ರಮಝಾನ್ ಎಂದು ರಶೀದ್ ಇದಕ್ಕೂ ಮುನ್ನ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು.

View this post on Instagram

A post shared by Rashid Khan (@rashid.khan19)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)