varthabharthi


ಕ್ರೀಡೆ

ಸಂಘಟಿತ ಪ್ರದರ್ಶನ: ರಾಜಸ್ಥಾನ್ ವಿರುದ್ಧ ಗೆಲುವಿನ ನಗೆ ಬೀರಿದ ಚೆನ್ನೈ ಸೂಪರ್ ಕಿಂಗ್ಸ್

ವಾರ್ತಾ ಭಾರತಿ : 19 Apr, 2021

ಮುಂಬೈ: ಆರಂಭಿಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಏಕಾಂಗಿ ಹೋರಾಟದ(49, 35 ಎಸೆತ, 5 ಬೌಂ. 2ಸಿ.) ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ನ 12ನೇ ಪಂದ್ಯದಲ್ಲಿ 45 ರನ್ ಗಳ ಅಂತರದಿಂದ ಸೋಲುಂಡಿದೆ.

ಚೆನ್ನೈ ಟೂರ್ನಿಯಲ್ಲಿ ತಾನಾಡಿದ 3ನೇ ಪಂದ್ಯದಲ್ಲಿ ಎರಡನೇ ಗೆಲುವು ದಾಖಲಿಸಿತು.

ಗೆಲ್ಲಲು 189 ರನ್ ಬೆನ್ನಟ್ಟಿದ ರಾಜಸ್ಥಾನ ತಂಡ ಚೆನ್ನೈ ಸ್ಪಿನ್ನರ್ ಮೊಯಿನ್ ಅಲಿ(3-7), ಸ್ಯಾಮ್ ಕರನ್(2-24) ಹಾಗೂ ರವೀಂದ್ರ ಜಡೇಜ(2-28) ಅವರ ಶಿಸ್ತುಬದ್ಧ ಬೌಲಿಂಗ್ ಗೆ ತತ್ತರಿಸಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟ್ಸ್ ಮನ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)