varthabharthi


ಅಂತಾರಾಷ್ಟ್ರೀಯ

ಮಂಗಳ ಗ್ರಹದ ಆಕಾಶದಲ್ಲಿ ಹಾರಾಡಿದ ನಾಸಾದ ಇಂಜ್ಯುನಿಟಿ: ಮುಖ್ಯ ಇಂಜಿನಿಯರ್‌ ಆಗಿ ಭಾರತ ಮೂಲದ ಬಾಬ್‌ ಬಲರಾಮ್

ವಾರ್ತಾ ಭಾರತಿ : 20 Apr, 2021

Photo: NASA

ನವದೆಹಲಿ: ನಾಸಾದ ಮಹತ್ವಾಕಾಂಕ್ಷೆಯ ಮಿನಿಯೇಚರ್ ರೋಬಾಟ್ ಹೆಲಿಕಾಪ್ಟರ್ ಇಂಜಿನ್ಯುಯಿಟಿ ಸೋಮವಾರ ಮಂಗಳ ಗ್ರಹದ ಆಕಾಶದ ಮೇಲೆ ಸೋಮವಾರ ಯಶಸ್ವಿಯಾಗಿ ತನ್ನ ಮೊದಲ ಹಾರಾಟವನ್ನು ಪೂರೈಸುವ ಮೂಲಕ ಬೇರೊಂದು ಗ್ರಹದಲ್ಲಿ  ಮಾನವ ನಿರ್ಮಿತ ನೌಕೆಯೊಂದನ್ನು ಪ್ರಥಮ ಬಾರಿಗೆ ಹಾರಾಟ ನಡೆಸಿದ ಶ್ರೇಯ ತನ್ನದಾಗಿಸಿಕೊಂಡಿದೆ. 

ಈ  ಯಶಸ್ವೀ ಇಂಜಿನ್ಯುಯಿಟಿ ಹಾರಾಟದ ಹಿಂದೆ ಭಾರತೀಯ ಮೂಲದ ಇಂಜಿನಿಯರ್ ಬಾಬ್ ಬಲರಾಮ್ ಅವರ ಪ್ರಯತ್ನಗಳಿವೆ. ಬಾಬ್ ಬಲರಾಮ್ ಅವರು ಕಳೆದ 20 ವರ್ಷಗಳಿಂದ ನಾಸಾಗೆ ಕೆಲಸ ಮಾಡುತ್ತಿದ್ದಾರೆ ಹಾಗೂ ಇಂಜಿನ್ಯುಯಿಟಿಯ ಮುಖ್ಯ ಇಂಜಿನಿಯರ್ ಆಗಿದ್ದಾರೆ.

ಮದ್ರಾಸ್ ಐಐಟಿಯ 1975-80  ಬ್ಯಾಚಿನ ಹಳೆ ವಿದ್ಯಾರ್ಥಿಯಾಗಿರುವ ಬಾಬ್ ಅಲ್ಲಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಬಿ.ಟೆಕ್ ಪದವಿ ಪಡೆದವರಾಗಿದ್ದಾರೆ.

ನಂತರ ಅವರು ಅಮೆರಿಕಾದ ಅತ್ಯಂತ ಹಳೆಯ ತಾಂತ್ರಿಕ ಸಂಶೋಧನಾ ವಿವಿಯಾಗಿರುವ ರೆನ್ಸ್ಸೆಲೆರ್ ಪಾಲಿಟೆಕ್ನಿಕ್ ಇನ್‍ಸ್ಟಿಟ್ಯೂಟ್‍ನಲ್ಲಿ ಕಂಪ್ಯೂಟರ್ ಎಂಡ್ ಸಿಸ್ಟಮ್ ಇಂಜಿನಿಯರಿಂಗ್‍ನಲ್ಲಿ ಎಂ ಎಸ್ ಹಾಗೂ ಪಿಎಚ್‍ಡಿ ಪದವಿ ಪಡೆದಿದ್ದಾರೆ.

ಪ್ರಸ್ತುತ ಅವರು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ  ಮಾರ್ಸ್ ಹೆಲಿಕಾಪ್ಟರ್ ಸ್ಕೌಟ್ ಪ್ರಾಜೆಕ್ಟ್‍ನ ಮುಖ್ಯ ಇಂಜಿನಿಯರ್ ಆಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)