varthabharthi


ರಾಷ್ಟ್ರೀಯ

ಮುಂಬೈನಲ್ಲಿ ಕೊರೋನ ಹೊಸ ಪ್ರಕರಣದಲ್ಲಿ ಇಳಿಕೆ

ವಾರ್ತಾ ಭಾರತಿ : 20 Apr, 2021

ಮುಂಬೈ: ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 7,000 ಹೊಸ ಸೋಂಕುಗಳು ಪತ್ತೆಯಾಗುವುದರೊಂದಿಗೆ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮಹಾನಗರದಲ್ಲಿ ಸೋಮವಾರ 7,381 ಸೋಂಕಿತರು ಪತ್ತೆಯಾಗಿದ್ದರು.

ಮುಂಬೈನಲ್ಲಿ  ಎಪ್ರಿಲ್ 4 ರಂದು ಒಂದೇ ದಿನ ಗರಿಷ್ಠ  11,163 ಪ್ರಕರಣಗಳು ದಾಖಲಾಗಿದ್ದವು. ಎಪ್ರಿಲ್ 12 ರವರೆಗೆ ಪ್ರತಿದಿನ 8,500 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.

ದೇಶದ ಆರ್ಥಿಕ ರಾಜಧಾನಿಯಲ್ಲಿ ಈವರೆಗೆ 5.9 ಲಕ್ಷಕ್ಕೂ ಹೆಚ್ಚು ಕೊರೋನವೈರಸ್ ಪ್ರಕರಣಗಳು ವರದಿಯಾಗಿದೆ.

ಮುಂಬೈನ ಮಹಾನಗರ ಪಾಲಿಕೆ ಬಿಎಂಸಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 47,000 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಸೋಮವಾರ 36,556 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

ನಗರದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣವು ಶೇಕಡಾ 83 ರಷ್ಟಿದ್ದರೆ, ಪ್ರಕರಣದ ಬೆಳವಣಿಗೆಯ ದರವು ಶೇಕಡಾ 1.46 ರಷ್ಟಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)