ನವಾಲ್ನಿ ನೋಡಲು ಅವರ ವೈದ್ಯರಿಗೆ ಅವಕಾಶ ನಿರಾಕರಣೆ
ಮಾಸ್ಕೋ (ರಶ್ಯ), ಎ. 20: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ದೇಹಸ್ಥಿತಿ ಹದಗೆಡುತ್ತಿರುವಂತೆಯೇ ಅವರನ್ನು ಜೈಲಿನ ಅಧಿಕಾರಿಗಳು ಸೋಮವಾರ ಜೈಲು ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ.
ಬೆನ್ನು ನೋವು ಮತ್ತು ಕೈಕಾಲುಗಳಲ್ಲಿ ಹಿಡಿದಿರುವ ಜೋಮಿಗೆ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ಅವರು ಮಾರ್ಚ್ 31ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಲ್ನಿಯನ್ನು ನೋಡಲು ಹೋದ ಅವರ ಖಾಸಗಿ ವೈದ್ಯರ ತಂಡವೊಂದಕ್ಕೆ ಅವರನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ನೀಡಿಲ್ಲ.
Next Story