ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗೆ ಮಾಜಿ ಕ್ರಿಕೆಟಿಗ ಬ್ರೆಟ್ ಲೀ 40 ಲಕ್ಷ ರೂ. ದೇಣಿಗೆ
ಹೊಸದಿಲ್ಲಿ: ಪ್ಯಾಟ್ ಕಮ್ಮಿನ್ಸ್ ಬಳಿಕ ಆಸ್ಟ್ರೇಲಿಯದ ಮಾಜಿ ವೇಗಿ ಬ್ರೆಟ್ ಲೀ ಮಂಗಳವಾರ ಕೋವಿಡ್ -19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ.
‘‘ಭಾರತದಲ್ಲಿರುವ ಆಸ್ಪತ್ರೆಗಳಿಗೆ ಆಮ್ಲಜನಕ ವ್ಯವಸ್ಥೆಗೆ ಸಹಾಯ ಮಾಡಲು ಕ್ರಿಪ್ಟೋ ರಿಲೀಫ್‌ಗೆ 1 ಬಿಟಿಸಿ (ಬಿಟ್‌ಕಾಯಿನ್) ದಾನ ಮಾಡುವುದಾಗಿ ಲೀ ಹೇಳಿದ್ದಾರೆ.
‘‘ಭಾರತವು ಯಾವಾಗಲೂ ನನಗೆ ಎರಡನೇ ಮನೆಯಂತೆಯೇ ಇದೆ. ನನ್ನ ವೃತ್ತಿಜೀವನದ ಅವಧಿಯಲ್ಲಿ ಮತ್ತು ನಿವೃತ್ತಿಯ ನಂತರವೂ ಈ ದೇಶದ ಜನರಿಂದ ನನಗೆ ದೊರೆತ ಪ್ರೀತಿ ಮತ್ತು ವಾತ್ಸಲ್ಯವನ್ನು ಮರೆಯಲು ಅಸಾಧ್ಯ. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರನ್ನು ನೋಡುವಾಗ ನನಗೆ ತುಂಬಾ ದುಃಖವಾಗುತ್ತದೆ’’ ಎಂದು ಲೀ ಹೇಳಿದರು. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುತ್ತಿರುವ ಆಸ್ಟ್ರೇಲಿಯದ ವೇಗಿ ಪ್ಯಾಟ್ ಕಮ್ಮಿನ್ಸ್ ಅವರು ಕೋವಿಡ್ -19 ವಿರುದ್ಧ ಭಾರತದ ಹೋರಾಟಕ್ಕೆ ನೆರವಾಗಲು ಭಾರತಕ್ಕೆ 50,000 ಸಾವಿರ ರೂ.( ಸಮಾರು 37 ಲಕ್ಷ ರೂ.) ದೇಣಿಗೆಯನ್ನು ಪಿಎಂ-ಕೇರ್ಸ್ ನಿಧಿಗೆ ನೀಡಿದ್ದರು.
Next Story