varthabharthi


ರಾಷ್ಟ್ರೀಯ

ಪೂರ್ಣ ಲಾಕ್ ಡೌನ್ ಒಂದೇ ಈಗ ಉಳಿದಿರುವ ದಾರಿ: ರಾಹುಲ್ ಗಾಂಧಿ

ವಾರ್ತಾ ಭಾರತಿ : 4 May, 2021

ಹೊಸದಿಲ್ಲಿ: ಭಾರತವನ್ನು ಕಂಗಾಲಾಗಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಕೇಂದ್ರ ಸರಕಾರ ಈ ತನಕ ತೆಗೆದುಕೊಂಡಿರುವ ಕ್ರಮಗಳಿಂದ ಏನು ಸಾಧ್ಯವಾಗುವುದಿಲ್ಲ. ಸಂಪೂರ್ಣ ಲಾಕ್ ಡೌನ್  ಒಂದೇ ಕೊರೋನ ಹರಡುವುದನ್ನು ತಡೆಯಲು ಇರುವ ಏಕೈಕ ದಾರಿ. ದುರ್ಬಲ ವರ್ಗದವರಿಗೆ 'ನ್ಯಾಯ್' ರಕ್ಷಣೆಯೊಂದಿಗೆ ಸಂಪೂರ್ಣ ಲಾಕ್ ಡೌನ್ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್  ಗಾಂಧಿ ಆಗ್ರಹಿಸಿದ್ದಾರೆ.

ಭಾರತ ಸರಕಾರಕ್ಕೆ ಇದೆಲ್ಲವೂ ಅರ್ಥವಾಗುವುದಿಲ್ಲ. ಸರಕಾರದ ನಿಷ್ಕ್ರಿಯತೆಯು ಅನೇಕ ಮುಗ್ದ ಜನರನ್ನು ಕೊಲ್ಲುತ್ತಿದೆ ಎಂದು ವಯನಾಡ್ ಸಂಸದ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು 2019ರ ಸಾರ್ವತ್ರಿಕ ಚುನಾವಣಾ ಪ್ರಣಾಳಿಕೆಯಲ್ಲಿ ದುರ್ಬಲ ವರ್ಗದವರಿಗೆ ನ್ಯಾಯ್ ಅಥವಾ ಕನಿಷ್ಟ ಆದಾಯ ಯೋಜನೆಯನ್ನು ಪ್ರಸ್ತಾಪಿಸಿತ್ತು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)