varthabharthi


ರಾಷ್ಟ್ರೀಯ

ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನೆರವಿಗೆ ನಿರ್ಧಾರ

ಮುಂದಿನ 2 ತಿಂಗಳು ಎಲ್ಲರಿಗೂ ಉಚಿತ ಪಡಿತರ ವಿತರಣೆ: ಅರವಿಂದ ಕೇಜ್ರಿವಾಲ್ ಘೋಷಣೆ

ವಾರ್ತಾ ಭಾರತಿ : 4 May, 2021

ಹೊಸದಿಲ್ಲಿ: ಮುಂದಿನ ಎರಡು ತಿಂಗಳವರೆಗೆ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ಸರಬರಾಜು,ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಆರ್ಥಿಕ ನೆರವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಘೋಷಿಸಿದ್ದಾರೆ.

ಲಾಕ್ ಡೌನ್ ಎರಡು ತಿಂಗಳು ಇರುತ್ತದೆ ಎಂದು ಇದರ ಅರ್ಥವಲ್ಲ ಎಂದು ಅವರು ಹೇಳಿದ್ದಾರೆ.

ದಯವಿಟ್ಟು ಇದನ್ನು ಲಾಕ್ ಡೌನ್ ವಿಸ್ತರಣೆ ಎಂದು ವ್ಯಾಖ್ಯಾನಿಸಬೇಡಿ.  ಲಾಕ್ ಡೌನ್ ಹೆಚ್ಚು ಕಾಲ ಇರುವುದಿಲ್ಲ ಎಂದು ಭಾವಿಸುತ್ತೇವೆ. ಪ್ರಕರಣಗಳ ಸಂಖ್ಯೆ ಕಡಿಮೆಯಾದ ತಕ್ಷಣ ನಾವು ಲಾಕ್ ಡೌನ್ ತೆರವು ಮಾಡಬಹುದು ಎಂದು ಅವರು ಹೇಳಿದರು.

ಕೋವಿಡ್ ಪ್ರಸರಣದ ಸರಪಳಿಯನ್ನು ಮುರಿಯಲು 3 ವಾರಗಳ ಹಿಂದೆ ದಿಲ್ಲಿಯಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಇದರಿಂದ ದೈನಂದಿನ ಕೂಲಿ ಕಾರ್ಮಿಕರಿಗೆ ಇತರರಿಗೆ ಗಳಿಕೆಯನ್ನು ಕಡಿತ ಮಾಡಿದೆ.

ಲಾಕ್ ಡೌನ್ ದೈನಂದಿನ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಕಳೆದ ವಾರ ನಾವು ನೋಂದಾಯಿತ ಕಾರ್ಮಿಕರಿಗೆ ತಲಾ 5000 ರೂ. ನೀಡಿದ್ದೇವೆ. ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯಕ್ಕೆ ಆದೇಶ ನೀಡಿದ್ದೇವೆ. ಮುಂದಿನ 2 ತಿಂಗಳ ತನಕ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ನೀಡಲು ನಾವು ನಿರ್ಧರಿಸಿದ್ದೇವೆ. ಆಟೋ, ಟ್ಯಾಕ್ಸಿ ಚಾಲಕರಿಗೆ ಆದಾಯವಿಲ್ಲವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಅವರಿಗೆ 5000 ರೂ.ನೀಡಲ ನಿರ್ಧರಿಸಿದ್ದೇವೆ. ಕಳೆದ ವರ್ಷ 1.56 ಲಕ್ಷ ಚಾಲಕರು ಇದರ ಲಾಭ ಪಡೆದಿದ್ದರು ಎಂದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)