varthabharthi


ರಾಷ್ಟ್ರೀಯ

ಅಲಕ್ಷ್ಯ, ನಾಯಕತ್ವದ ಕೊರತೆಯನ್ನು ಎತ್ತಿ ತೋರಿಸುತ್ತಿರುವ ಭಾರತದ ಕೋವಿಡ್ ಬಿಕ್ಕಟ್ಟು: ರಘುರಾಮ್ ರಾಜನ್

ವಾರ್ತಾ ಭಾರತಿ : 4 May, 2021

ಹೊಸದಿಲ್ಲಿ : "ಕಳೆದ ವರ್ಷದ ಮೊದಲ ಕೋವಿಡ್ ಅಲೆಯ ನಂತರ ಈಗ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕಂಡು ಬರುತ್ತಿರುವ ಭಾರೀ ಏರಿಕೆಯ ಹಿಂದೆ ಅಲಕ್ಷ್ಯವಿದೆಯಲ್ಲದೆ 'ದೂರದೃಷ್ಟಿ ಮತ್ತು ನಾಯಕತ್ವದ ಕೊರತೆ' ಎದ್ದು ಕಾಣುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

"ನೀವು ಎಚ್ಚರಿಕೆಯಿಂದಿದ್ದರೆ, ಜಾಗರೂಕತೆಯಿಂದಿದ್ದರೆ ಹಾಗೂ ಅದು ಇನ್ನೂ ಮುಗಿದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಿತ್ತು,'' ಎಂದು ರಾಜನ್  ಮಂಗಳವಾರ 'Bloomberg'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಜಗತ್ತಿನ ಉಳಿದ ಭಾಗದಲ್ಲಿ ಏನು ನಡೆಯುತ್ತಿದೆ ಎಂಬುದರತ್ತ ಯಾರಾದರೂ ಗಮನ ನೀಡಿದ್ದರೆ, ಉದಾಹರಣೆಗೆ ಬ್ರೆಝಿಲ್ ದೇಶದಲ್ಲಿ, ಈ ವೈರಸ್ ಮತ್ತೆ ವಾಪಸ್ ಬರುತ್ತದೆ ಹಾಗೂ ಇನ್ನಷ್ಟು ಅಪಾಯಕಾರಿಯಾಗುತ್ತದೆ ಎಂಬುದನ್ನು ಅರಿಯುತ್ತಿದ್ದರು,'' ಎಂದು ರಾಜನ್ ಹೇಳಿದ್ದಾರೆ.

"ಈ ಸೋಂಕಿನ ಗರಿಷ್ಠ ಮಟ್ಟವನ್ನು ದಾಟಿ ನಾವು ಹೊರಬಂದಿದ್ದೇವೆ ಹಾಗೂ ಎಲ್ಲವನ್ನೂ ತೆರೆಯುವ ಸಮಯ ಬಂದಿದೆ ಎಂಬ ಅಭಿಪ್ರಾಯವಿತ್ತು ಹಾಗೂ ಈ ಅಲಕ್ಷ್ಯವೇ ಈಗ ನಮ್ಮನ್ನು ಕಾಡುತ್ತಿದೆ,'' ಎಂದು ಹೇಳಿದ ಅವರು "ಕೋವಿಡ್ ಮೊದಲನೇ ಅಲೆಯನ್ನು ನಿಭಾಯಿಸುವಲ್ಲಿ ಭಾರತ ಸಾಧಿಸಿದ ಸಾಕಷ್ಟು ಯಶಸ್ಸಿನಿಂದಾಗಿ ತನ್ನದೇ ಜನಸಂಖ್ಯೆಗೆ ಸಾಕಷ್ಟು ಲಸಿಕೆಗಳನ್ನು ಅದು ಸಿದ್ಧಪಡಿಸಿಕೊಳ್ಳಲಿಲ್ಲ, ನಮಗೆ ಸಮಯುವಿದೆ ಎಂಬ ಭಾವನೆ ಹಾಗೂ ಲಸಿಕೆ ಅಭಿಯಾನ ನಿಧಾನವಾಗಿ ಮಾಡಬಹುದೆಂಬ ಭಾವನೆಯಿತ್ತು,'' ಎಂದು ಅವರು ಹೇಳಿದರಲ್ಲದೆ ಸರಕಾರ ಈಗ ಈ ಸಾಂಕ್ರಾಮಿಕದ ವಿರುದ್ಧ ತುರ್ತು ಕಾರ್ಯಾಚರಣೆಗೆ ಮುಂದಾಗಿದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)