varthabharthi


ರಾಷ್ಟ್ರೀಯ

ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ

ವಾರ್ತಾ ಭಾರತಿ : 5 May, 2021

Photo: Twitter/@ANI

ಕೋಲ್ಕತಾ: ಕೋವಿಡ್-19 ಹಾವಳಿ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿರುವ ರಾಜ್ಯಪಾಲರ ನಿವಾಸದಲ್ಲಿ ಬುಧವಾರ ನಡೆದ ಸರಳ ಸಮಾರಂಭವೊಂದರಲ್ಲಿ ಮಮತಾ ಬ್ಯಾನರ್ಜಿ ಅವರು ಮೂರನೇ ಬಾರಿ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಜಗದೀಪ್ ದಂಕರ್ ಪ್ರಮಾಣವಚನ ಬೋಧಿಸಿದರು.

ರಾಜಭವನದಲ್ಲಿ ಕೋವಿಡ್ ಶಿಷ್ಟಾಚಾರದೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. 

ಉಳಿದ ಸಂಪುಟ ಸಚಿವರು ಹಾಗೂ ಕೌನ್ಸಿಲ್ ಸಚಿವರು ರವೀಂದ್ರನಾಥ ಟಾಗೋರ್ ಜನ್ಮದಿನವಾದ ಮೇ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮಮತಾ ನೇತೃತ್ವದ ಟಿಎಂಸಿ ಬಂಗಾಳ ಚುನಾವಣೆಯಲ್ಲಿ 292 ಸೀಟುಗಳಲ್ಲಿ 213 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಪ್ರಬಲ ಎದುರಾಳಿ ಬಿಜೆಪಿ 77 ಸೀಟುಗಳನ್ನು ಗೆದ್ದುಕೊಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)