ಬಂಗಾಳದ ಎಲ್ಲ 77 ಬಿಜೆಪಿ ಶಾಸಕರಿಗೆ ಕೇಂದ್ರ ಭದ್ರತಾ ಪಡೆಗಳಿಂದ ರಕ್ಷಣೆ: ವರದಿ
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಚುನಾಯಿತರಾದ ಬಿಜೆಪಿಯ 77 ಶಾಸಕರಿಗೆ ಸಂಭಾವ್ಯ ಬೆದರಿಕೆಯ ದೃಷ್ಟಿಯಿಂದ ಕೇಂದ್ರೀಯ ಭದ್ರತಾ ಪಡೆಗಳ ರಕ್ಷಣೆಯನ್ನು ಒದಗಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಬಿಜೆಪಿ ಶಾಸಕರಿಗೆ ಸಿಐಎಸ್ಎಫ್ ಹಾಗೂ ಸಿಆರ್ ಪಿಎಫ್ ಸಶಸ್ತ್ರ ಕಮಾಂಡೋಗಳು ಭದ್ರತೆ ಒದಗಿಸಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರ ವಿರುದ್ಧ ಮತದಾನೋತ್ತರ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಸಚಿವಾಲಯವು ರಾಜ್ಯಕ್ಕೆ ಕಳುಹಿಸಿದ ಉನ್ನತ ಮಟ್ಟದ ಅಧಿಕಾರಿಗಳು, ಕೇಂದ್ರ ರಕ್ಷಣಾ ಸಂಸ್ಥೆಗಳು ಸಲ್ಲಿಸಿದ ವರದಿಯ ನಂತರ ಕೇಂದ್ರ ಗೃಹ ಸಚಿವಾಲಯ ಭದ್ರತೆಗೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.
61 ಶಾಸಕರನ್ನು ಅತ್ಯಂತ ಕಡಿಮೆ 'ಎಕ್ಸ್' ವರ್ಗದ ಭದ್ರತೆಗೆ ಒಳಪಡಿಸಲಾಗುವುದು ಹಾಗೂ ಕೇಂದ್ರ ಗೃಹ ಸಚಿವಾಲಯದ ಹೊಸ ಆದೇಶದ ಪ್ರಕಾರ ಕಮಾಂಡೋಗಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಿಂದ ಕರೆಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ..
ಇನ್ನುಳಿದ ಶಾಸಕರು ಉನ್ನತ ಭದ್ರತಾ ವರ್ಗ '' ವೈ 'ಅಡಿಯಲ್ಲಿ ಒಳಗೊಳ್ಳುತ್ತಾರೆ. ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಈಗಾಗಲೇ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) '' ಝೆಡ್ '' ವಿಭಾಗದಿಂದ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.