ಮಹಾರಾಷ್ಟ್ರದಲ್ಲಿ ಜೂನ್ 1ರ ತನಕ ನಿರ್ಬಂಧ ಮುಂದುವರಿಕೆ
ಮುಂಬೈ: ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರಕಾರ ಜೂನ್ 1ರ ತನಕ ನಿರ್ಬಂಧವನ್ನು ಮುಂದುವರಿಸಲು ನಿರ್ಧರಿಸಿದೆ.
ಕೊರೋನವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮಹಾರಾಷ್ಟ್ರ ಸರಕಾರ ತುರ್ತು ಕ್ರಮಗಳನ್ನು ಮುಂದಿನ ತಿಂಗಳವರೆಗೆ ವಿಸ್ತರಿಸಿದೆ. ಜೂನ್ 1 ರಂದು ಬೆಳಿಗ್ಗೆ 7 ಗಂಟೆಯವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಗುರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬುಧವಾರ 46,781 ಹೊಸ ಕೊರೋನ ಪ್ರಕರಣಗಳು ಹಾಗೂ 816 ಸಾವುಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 58,805 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.
ಪಾಸಿಟಿವಿಟಿ(ಸಕಾರಾತ್ಮಕ) ಪ್ರಮಾಣವು ಶೇಕಡಾ 17.36 ಕ್ಕೆ ಇಳಿದಿದ್ದರೆ, ಸಾವಿನ ಪ್ರಮಾಣವು ಶೇಕಡಾ 1.49 ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Next Story