ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ: ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್ ಅಮಾನತು
ಕೋಲಾರ, ಮೇ 15: ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್ ಅವರನ್ನು ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಜನವರಿ 2ರಂದು ಕೋಲಾರ ಡಿಹೆಚ್ಒ ಡಾ.ವಿಜಯಕುಮಾರ್ ಅವರ ಮನೆ, ಕಚೇರಿ ಹಾಗೂ ನರ್ಸಿಂಗ್ ಹೋಂ ಮೇಲೆ ದಾಳಿ ನಡೆಸಿದ್ದ ಎಸಿಬಿ ತನಿಖೆ ನಡೆಸುತ್ತಿತ್ತು. ಇದೀಗ ಸರ್ಕಾರಕ್ಕೆ ತನಿಖಾ ಮಾಹಿತಿ ಲಭ್ಯವಾಗಿದ್ದು, ದಾಳಿಗೆ ಒಳಗಾಗಿದ್ದ ಡಾ. ವಿಜಯಕುಮಾರ್ ಆದಾಯಕ್ಕಿಂತ ಶೇ.343 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವ ಆಪಾದನೆ ಹೊತ್ತಿದ್ದು, ಅದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಹಿನ್ನೆಲೆ ಸರಕಾರ ಅವರನ್ನು ಅಮಾನತು ಮಾಡಿ ಅದೇಶ ಹೊರಡಿಸಿದೆ.
Next Story