ನಾರದ ಸ್ಟಿಂಗ್ ಆಪರೇಶನ್: ಬಂಧಿಸಲ್ಪಟ್ಟ ಇಬ್ಬರು ಮಂತ್ರಿಗಳು ಸೇರಿದಂತೆ ನಾಲ್ವರಿಗೆ ಜಾಮೀನು
ಹೊಸದಿಲ್ಲಿ: ನಾರದ ಲಂಚ ಪ್ರಕರಣದಲ್ಲಿ ಸಿಬಿಐ ನಿಂದ ಇಂದು ಬಂಧಿಲ್ಪಟ್ಟಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರಕಾರದ ಇಬ್ಬರು ಸಚಿವರು ಸೇರಿದಂತೆ ನಾಲ್ವರು ನಾಯಕರಿಗೆ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸುಮಾರು ಏಳು ಗಂಟೆಗಳ ನಡೆದ ನಾಟಕೀಯ ಬೆಳವಣಿಗೆಯ ನಂತರ ಜಾಮೀನು ನೀಡಲಾಯಿತು.
ನಾರದ ಲಂಚ ಪ್ರಕರಣದಲ್ಲಿ ಬಂಗಾಳ ಸಚಿವರಾದ ಫಿರ್ಹಾದ್ ಹಕೀಮ್ ಹಾಗೂ ಸುಬ್ರತಾ ಮುಖರ್ಜಿ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ. ತೃಣಮೂಲ ಶಾಸಕ ಮದನ್ ಮಿತ್ರ ಹಾಗೂ ಮಾಜಿ ತೃಣಮೂಲ ನಾಯಕ, ಬಿಜೆಪಿಯನ್ನು ಸೇರಿ ಆ ಪಕ್ಷವನ್ನು ತ್ಯಜಿಸಿರುವ ಸೋವನ್ ಚಟರ್ಜಿಯವರನ್ನು ಕೂಡ ಸಿಬಿಐ ಬಂಧಿಸಿತ್ತು.
“ಸರಿಯಾದ ಕಾರ್ಯವಿಧಾನವಿಲ್ಲದೆ ನಾಲ್ವರನ್ನು ಸಿಬಿಐ ಹೇಗೆ ಬಂಧಿಸಿದೆಯೋ ಅದೇ ರೀತಿ ನನ್ನನ್ನು ಸಹ ಬಂಧಿಸಬೇಕು "ಎಂದು ನಿಝಾಮ್ ಪ್ಯಾಲೇಸ್ ನಲ್ಲಿರುವ ಸಿಬಿಐ ಕಚೇರಿಯಲ್ಲಿ ಆರು ಗಂಟೆಗಳ ಕಾಲ ಕಳೆದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Next Story