ಇಬ್ರಾಹಿಂ ಹಾಜಿ
ಪುತ್ತೂರು: ನೆಲ್ಯಾಡಿ ಮಸೀದಿ ಬಳಿ ನಿವಾಸಿ, ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಇಬ್ರಾಹಿಂ ಹಾಜಿ (84) ಬುಧವಾರ ಹೃದಯಾಘಾತದಿಂದ ನಿಧನರಾದರು.
ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ, ನೆಲ್ಯಾಡಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷರಾದಿಯಾಗಿ ಹಲವಾರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದರು.
ಲಾರಿ ಮಾಲಕರಾಗಿದ್ದ ಇವರು ತನ್ನ ಲಾರಿಗೆ 'ಪ್ರಿಯದರ್ಶಿನಿ' ಹೆಸರು ಇಟ್ಟುಕೊಂಡಿದ್ದರಿಂದ 'ಪ್ರಿಯದರ್ಶಿನಿ ಇಬ್ರಾಹಿಂ' ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story