ಉಡುಪಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸ್ವಾಬ್ ಸಾಗಾಟ ವಿಳಂಬ
ಗ್ರಾಮಾಂತರದಲ್ಲಿ ಪಾಸಿಟಿವ್ ವರದಿಗೂ 2 ದಿನ ಕಾಯುವ ಪರಿಸ್ಥಿತಿ !
ಉಡುಪಿ, ಮೇ 29: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಯು ಅಜ್ಜರ ಕಾಡು ಜಿಲ್ಲಾಸ್ಪತ್ರೆಯಲ್ಲಿರುವ ಪ್ರಯೋಗಾಲಯಕ್ಕೆ ತಲು ಪಲು ವಿಳಂಬವಾಗುತ್ತಿರುವುದರಿಂದ ಗ್ರಾಮೀಣ ಭಾಗದ ಜನ ಪಾಸಿಟಿವ್ ವರದಿಗಾಗಿಯೂ ಎರಡು ದಿನ ಕಾಯುವ ಪರಿಸ್ಥಿತಿ ಎದುರಾಗಿದೆ. ಈ ತಾಂತ್ರಿಕ ಸಮಸ್ಯೆಯೇ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡಲು ಕಾರಣವೇ ಎಂಬ ಪ್ರಶ್ನೆ ಇದೀ ಸಾರ್ವಜನಿಕ ವಲಯದಲ್ಲಿ ಕಾಡುತ್ತಿವೆ.
ಉಡುಪಿ ಜಿಲ್ಲಾಸ್ಪತ್ರೆಯಿಂದ ಕೇವಲ 13 ಕಿ.ಮೀ. ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಮೇ 26ರಂದು ಬೆಳಗ್ಗೆ 10:20ಕ್ಕೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಯು ಜಿಲ್ಲಾಸ್ಪತ್ರೆಯ ಪ್ರಯೋಗಾಲಯಕ್ಕೆ ತಲುಪಿರುವುದು ಮೇ 27ರಂದು ಸಂಜೆ 4:20ಕ್ಕೆ ಎಂದು ತಿಳಿದುಬಂದಿದೆ.
ಇಲ್ಲಿ ಆ ಮಾದರಿಯನ್ನು ಪರೀಕ್ಷಿಸಿ ಕೊರೋನ ಪಾಸಿಟಿವ್ ಎಂಬು ದಾಗಿ ರೋಗಿಯ ಮೊಬೈಲ್‌ಗೆ ಸಂದೇಶ ಬಂದಿರುವುದು ಮೇ 28ರಂದು ಅಪರಾಹ್ನ 2 ಗಂಟೆಗೆ. ಹೀಗೆ ಕೊರೋನ ರೋಗಿಯೊಬ್ಬರಿಂದ ಸಂಗ್ರಹಿ ಸಿದ ಗಂಟಲು ದ್ರವದ ಪರೀಕ್ಷೆಯ ವರದಿ ಬರಲು ಬರೋಬರಿ 52 ಗಂಟೆಗಳ ಅವಧಿ ಬೇಕಾಗಿದೆ. ಇದೇ ರೀತಿ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಿದ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಲು 2 ದಿನಗಳ ಕಾಯಬೇಕಾಗಿದೆ.
ಸೋಂಕು ಹರಡುವ ಭೀತಿ: ಸಾಮಾನ್ಯ ವಾಗಿ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಮಾದರಿ ಸಂಗ್ರಹಿಸುವಾಗ ಪಾಸಿಟಿವ್ ವರದಿ 24 ಗಂಟೆ ಗಳಲ್ಲಿ ಹಾಗೂ ನೆಗೆಟಿವ್ ವರದಿ 3ದಿನಗಳ ಬರುತ್ತದೆ ಎಂಬ ಉತ್ತರ ಸಿಗುತ್ತದೆ. ಇದರಂತೆ ಕೆಲವರು 24 ಗಂಟೆಗಳಲ್ಲಿ ತಮ್ಮ ಮೊಬೈಲ್‌ಗೆ ಕರೆ ಅಥವಾ ಸಂದೇಶ ಬಾರದಿದ್ದರೆ ತಮ್ಮ ವರದಿ ನೆಗೆಟಿವ್ ಎಂದೇ ಭಾವಿಸಿ ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಇದು ಕೂಡ ಸೋಂಕು ಹರಡಲು ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಅಲ್ಲದೆ ಕೊರೋನ ಸೋಂಕಿತರು ಆಯುಷ್ಮಾನ್‌ನಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕಾದರೆ ಎಸ್‌ಆರ್‌ಎಫ್ ಐಡಿ ಬಹಳ ಮುಖ್ಯವಾಗಿರುತ್ತದೆ. ಆದರೆ ಪರೀಕ್ಷಾ ವರದಿ ವಿಳಂಬ ವಾಗುವುದರಿಂದ ಗ್ರಾಮೀಣ ಭಾಗದ ಜನತೆ ಈ ಐಡಿಗಾಗಿ ಕಾಯುವಂತಾಗುತ್ತಿದೆ. ಆದರೆ ಇಲಾಖಾಧಿಕಾರಿಗಳ ಪ್ರಕಾರ ಸೋಂಕಿ ತರಿಗೆ ತುರ್ತು ಚಿಕಿತ್ಸೆ ಇದ್ದರೆ ಈ ಐಡಿಗೆ ಕಾಯದೆ ನೇರವಾಗಿ ಬಂು ಆಸ್ಪತ್ರೆಗೆ ದಾಖಲಾಗಬಹುದಾಗಿದೆ.
3 ದಿನಗಳಿಂದ ಸಮಸ್ಯೆ: ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಸ್ವಾಬ್‌ಗಳನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತರಲಾಗುತ್ತದೆ. ಅದೇರೀತಿ ಆ ಕೇಂದ್ರದಲ್ಲಿಯೂ ತೆಗೆದ ಸ್ವಾಬ್‌ಗಳನ್ನು ಮಧ್ಯಾಹ್ನ ಹಾಗೂ ಸಂಜೆ ಎರಡು ಸಮಯದಲ್ಲಿ ವಾಹನ ಬಂದು ೆಗೆದುಕೊಂಡು ಹೋಗಲಾಗುತ್ತದೆ.
ಅಲ್ಲಿಂದ ಆಯಾ ತಾಲೂಕು ಆರೋಗ್ಯ ಕಚೇರಿಗಳಿಗೆ ಸ್ವಾಬ್ ತಲುಪಿಸಲಾಗುತ್ತದೆ. ಅಲ್ಲಿ ಈ ಸ್ವಾಬ್‌ಗಳಿಗೆ ಮರು ಸಂಖ್ಯೆ ನೀಡಲಾಗುತ್ತದೆ. ಹೊಸ ಸಂಖ್ಯೆ ನೀಡಿ ಪಟ್ಟಿ ಮಾಡಿ ಅವುಗಳನ್ನು ಸರ್ವೆಲೆನ್ಸ್ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಲ್ಯಾಬ್ ನಂಬರ್ ಹಾಕಲಾಗುತ್ತದೆ. ಸರ್ವೆಲೆನ್ಸ್ ಕಚೇರಿಯಲ್ಲಿ ಎಲ್ಲ ತಾಲೂಕುಗಳಿಂದ ಬಂದ ಸ್ವಾಬ್‌ಗಳನ್ನು ಒಟ್ಟು ಮಾಡಿ ಲ್ಯಾಬ್‌ಗೆ ನೀಡ ಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಆರೋಗ್ಯ ಕೇಂದ್ರಗಳಿಂದ ಸಂಗ್ರಹಿಸಿದ ಸ್ವಾಬ್‌ಗಳು ಕಳೆದ ಎರಡು-ಮೂರು ದಿನಗಳಿಂದ ಈ ರೀತಿ ವಿಳಂಬ ಆಗಿ ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರಿಂದ ವರದಿ ಬರಲು ತುಂಬಾ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಸ್ವಾಬ್ ಸಾಗಿಸುವ ವಾಹನಗಳನ್ನು ಹೆಚ್ಚಿಸುವಂತೆ ಜಿಲ್ಲಾಡಳಿತವನ್ನು ಕೇಳಿದ್ದೇವೆ. ಅದರಂತೆ ತ್ವರಿತಗತಿಯಲ್ಲಿ ಸ್ವಾಬ್‌ಗಳನ್ನು ಲ್ಯಾಬ್‌ಗೆ ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಬ್‌ನಲ್ಲಿ 24 ಗಂಟೆಯೊಳಗೆ ವರದಿ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಜಿಲ್ಲೆಯ ಏಕೈಕ ಸರಕಾರಿ ಪ್ರಯೋಗಾಲಯದಲ್ಲಿ ಪ್ರತಿದಿನ ಸುಮಾರು 2,800-3,000 ಸ್ವಾಬ್‌ಗಳನ್ನು ಪರೀಕ್ಷಿಸಿ 24 ಗಂಟೆಯೊಳಗೆ ವರದಿ ನೀಡಲಾಗುತ್ತದೆ.
ಮಣಿಪಾಲ ಆಸ್ಪತ್ರೆಯಲ್ಲಿ ಸಂಗ್ರಹಿಸಿದ ಸ್ವಾಬ್‌ನ್ನು ಅಲ್ಲೇ ಇರುವ ಲ್ಯಾಬ್‌ನಲ್ಲಿ ಪರೀಕ್ಷಿ ಸಲಾಗುತ್ತದೆ. ಉಳಿದಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಿಂದಲೂ ಮಾದರಿಗಳನ್ನು ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಲ್ಯಾಬ್‌ಗೆ ಕಳುಹಿಲಾಗುತ್ತದೆ.
ಲ್ಯಾಬ್‌ಗೆ ಬಂದ ಮಾದರಿಯನ್ನು ಪರೀಕ್ಷಿಸಿ 24 ಗಂಟೆಯೊಳಗೆ ಪರೀಕ್ಷಿಸಿ ಅಪ್‌ಲೋಡ್ ಮಾಡಲಾಗುತ್ತದೆ. ಆದರೆ ಆಯಾ ಕೇಂದ್ರಗಳಿಂದ ಲ್ಯಾಬ್‌ಗೆ ಮಾದರಿ ಬರುವುದೇ ವಿಳಂಬವಾಗುವುದರಿಂದ ವರದಿ ಕೂಡ ತಡವಾಗಿ ಬರುತ್ತಿದೆ ಎಂದು ಜಿಲ್ಲಾ ಸರ್ಜನ್ ಡಾ.ಮದುಸೂಧನ್ ನಾಯಕ್ ತಿಳಿಸಿದ್ದಾರೆ.
ಸ್ವಾಬ್ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ದಿನಕ್ಕೆ ಮೂರು ಬಾರಿ ಸ್ವಾಬ್ ಸಂಗ್ರಹ ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಕಡ್ಡಾಯವಾಗಿ ಮಾಡಬೇಕು. ಅದಕ್ಕೆ ವಾಹನಗಳ ಕೊರತೆ ಇದ್ದರೆ ನಾಳೆಯೇ ನೀಡುವ ವ್ಯವಸ್ಥೆ ಮಾಡಲಾಗುವುದು. ಆಯಾ ದಿನದ ಸ್ವಾಬ್ ಅದೇ ದಿನ ಪ್ರಯೋಗಾಲಯಕ್ಕೆ ಹೋಗಬೇಕು.
- ಜಿ.ಜಗದೀಶ್,
ಜಿಲ್ಲಾಧಿಕಾರಿ, ಉಡುಪಿ