ಮಹಾರಾಷ್ಟ್ರ ಸಚಿವಾಲಯಕ್ಕೆ ಹುಸಿ ಬಾಂಬ್ ಕರೆ
ಮುಂಬೈ, ಮೇ 30: ಮಹಾರಾಷ್ಟ್ರ ಸರಕಾರದ ಸಚಿವಾಲಯದಲ್ಲಿ ಬಾಂಬ್ ಇರಿಸಿರುವ ಬಗ್ಗೆ ರವಿವಾರ ಮಧ್ಯಾಹ್ನ ಹುಸಿ ಕರೆ ಬಂದಿದೆ ಎಂದು ಮೂಲಗಳು ಹೇಳಿವೆ.
ಮುಂಬೈ ಪೊಲೀಸ್, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ತಂಡಗಳು ತಕ್ಷಣ ಸಚಿವಾಲಯಕ್ಕೆ ಧಾವಿಸಿ ಶೋಧ ಕಾರ್ಯದಲ್ಲಿ ನಿರತವಾಗಿವೆ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಕರೆಯಂತೆ ತೋರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯಾಹ್ನ 12:40ಕ್ಕೆ ಮಹಾರಾಷ್ಟ್ರ ಸಚಿವಾಲಯ ಕಟ್ಟಡದಲ್ಲಿರುವ ವಿಪತ್ತು ನಿರ್ವಹಣಾ ವಿಭಾಗದ ಕಚೇರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಸಚಿವಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ಹೇಳಿದ್ದ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story