ಟೋಕಿಯೊ ಒಲಿಂಪಿಕ್ಸ್ ನಿಂದ ಹಿಂದೆ ಸರಿದ ಬ್ಯಾಡ್ಮಿಂಟನ್ ಚಾಂಪಿಯನ್ ಕರೋಲಿನಾ ಮರಿನ್
ಮ್ಯಾಡ್ರಿಡ್: ಸ್ಪೇನ್ ನ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಕರೋಲಿನಾ ಮರಿನ್ ಮಂಡಿನೋವಿನಿಂದಾಗಿ ಟೋಕಿಯೊ ಒಲಿಂಪಿಕ್ಸ್ ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮಂಗಳವಾರ ಧೃಢಪಡಿಸಿದರು.
ಐದು ಬಾರಿಯ ಯುರೋಪಿಯನ್ ಹಾಗೂ ಮೂರು ಬಾರಿಯ ವಿಶ್ವ ಚಾಂಪಿಯನ್ ಕರೋಲಿನಾ ಮರಿನ್ ಅವರು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪಿ.ವಿ. ಸಿಂಧು ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಜಯಿಸಿದ್ದರು.
ವಾರಾಂತ್ಯದಲ್ಲಿ ಎಡ ಮಂಡಿಯ ಪರೀಕ್ಷೆಯನ್ನು ನಡೆಸಿ, ವೈದ್ಯಕೀಯ ಸಲಹೆಗಾರರನ್ನು ಭೇಟಿಯಾದ ನಂತರ ಗಾಯದ ಗಂಭೀರತೆ ಗೊತ್ತಾಗಿದೆ ಎಂದು ಸಾಮಾಜಿಕ ಮಾಧ್ಯಮ ಚಾನೆಲ್ ಗೆ ತಿಳಿಸಿದ್ದಾರೆ.
Next Story