varthabharthi


ಕರ್ನಾಟಕ

ಶುಕ್ರವಾರ ನಡೆಯಬೇಕಿದ್ದ ಮೈಸೂರು ಮೇಯರ್ ಚುನಾವಣೆಗೆ ಹೈಕೋರ್ಟ್ ತಡೆ

ವಾರ್ತಾ ಭಾರತಿ : 10 Jun, 2021

ಮೈಸೂರು,ಜೂ.10: ಜೂ.11 (ಶುಕ್ರವಾರ) ನಡೆಯಬೇಕಿದ್ದ ಮೈಸೂರು ಮೇಯರ್ ಚುನಾವಣೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.

ನಗರ ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ ಅವರು ಈ ಸಂಬಂಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಲಾಕ್‍ಡೌನ್ ಇರುವ ಕಾರಣ ಚುನಾವಣೆ ನಡೆಸುವುದು ಮಾರ್ಗಸೂಚಿ ಉಲ್ಲಂಘನೆಯಾಗುತ್ತದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೇಯರ್ ಚುನಾವಣೆಗೆ ತಡೆ ನೀಡಿದೆ. ಜೂನ್ 21ರ ನಂತರ ಚುನಾವಣೆ ನಡೆಸುವಂತೆ ತನ್ನ ಆದೇಶದಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)