ಬಹರೈನ್: ಕೈದಿಯ ಸಾವು ವಿರೋಧಿಸಿ ನೂರಾರು ಮಂದಿ ಪ್ರತಿಭಟನೆ
photo: twitter (@KenRoth)
ಮನಾಮ (ಬಹರೈನ್), ಜೂ. 10: ಬಹರೈನ್ ನಲ್ಲಿ ಕೊರೋನ ವೈರಸ್ ನಿಂದಾಗಿ ಕೈದಿಯೊಬ್ಬ ಸಾವಿಗೀಡಾಗಿರುವ ಘಟನೆಯ ವಿರುದ್ಧ ಬುಧವಾರ ನೂರಾರು ಮಂದಿ ಪ್ರತಿಭಟಿಸಿದ್ದಾರೆ. ಈ ಕೈದಿಗೆ ತಿಂಗಳುಗಳ ಮೊದಲೇ ಲಸಿಕೆ ನೀಡಲಾಗಿದ್ದರೂ ಸಾವು ಸಂಭವಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಬುಧವಾರ ಹಗಲು ಹುಸೈನ್ ಬರಕತ್ ಎಂಬ ಕೈದಿಯ ಸಾವು ಸಂಭವಿಸಿತು. ಅದೇ ದಿನ ರಾತ್ರಿ ದಿಯಾಹ್ ಎಂಬ ಗ್ರಾಮದ ಬೀದಿಗಳಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.
ಜೈಲಿನಲ್ಲಿ ಕಳಪೆ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದ್ದು, ಕೈದಿಯ ಸಾವಿಗೆ ದೊರೆ ಹಾಮದ್ ಬಿನ್ ಇಸಾ ಅಲ್ ಖಲೀಫರೇ ಜವಾಬ್ದಾರಿ ಎಂಬ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು.
48 ವರ್ಷದ ಬರಕಾತ್ ಗೆ ಕೃತಕ ಶ್ವಾಸ ನೀಡಲಾಗುತ್ತಿತ್ತು ಹಾಗೂ ಅವರು ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಬಹರೈನ್ ಆಂತರಿಕ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.
Protests erupted in #Bahrain this evening following the tragic death of political prisoner Husain Barakat due to #COVID19 pic.twitter.com/1hOY07TDbE
— Sayed Ahmed AlWadaei (@SAlwadaei) June 9, 2021