varthabharthi


ರಾಷ್ಟ್ರೀಯ

ಪಶ್ಚಿಮಬಂಗಾಳ: ಭಾರತ-ಬಾಂಗ್ಲಾ ಗಡಿಯಲ್ಲಿ ಚೀನಾ ವ್ಯಕ್ತಿಯ ಬಂಧನ

ವಾರ್ತಾ ಭಾರತಿ : 10 Jun, 2021

ಕೋಲ್ಕತಾ, ಜೂ. 11: ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ 35 ವರ್ಷದ ಚೀನಾ ವ್ಯಕ್ತಿಯೋರ್ವನನ್ನು ಗುರುವಾರ ಬಂಧಿಸಿದೆ. ಜುನ್ವೈ ಹನ್ ಎಂದು ಗುರುತಿಸಲಾದ ಈ ವ್ಯಕ್ತಿಯಿಂದ ಚೀನದ ಪಾಸ್ ಪೋರ್ಟ್, ಬಾಂಗ್ಲಾದೇಶದ ವಿಸಾ, ಲ್ಯಾಪ್ ಟಾಪ್ ಹಾಗೂ 3 ಮೊಬೈಲ್ ಫೋನ್ ಸಿಮ್ ಕಾರ್ಡ್ ಅನ್ನು ಭದ್ರತಾ ಪಡೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಕಪ್ಪು ಸ್ವೆಟರ್ ಹಾಗೂ ಶೂ ಧರಿಸಿದ್ದ ಈ ವ್ಯಕ್ತಿ ಬೆಳಗ್ಗೆ 7 ಗಂಟೆಗೆ ಮಾಲ್ಡಾ ಜಿಲ್ಲೆಯಲ್ಲಿ ಗಡಿ ದಾಟಿ ಭಾರತದ ಭೂಭಾಗಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಗಡಿ ಭದ್ರತಾ ಪಡೆ ಬಂಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಕ್ತಿಯನ್ನು ಗಡಿ ಭದ್ರತಾ ಪಡೆಯ ಕಾಲಿಯಾಚಾಕ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆತನ ವಿಚಾರಣೆಯನ್ನು ಸಂಬಂಧಿತ ತನಿಖಾ ಸಂಸ್ಥೆ ನಡೆಸುತ್ತಿದೆ ಎಂದು ಗಡಿ ಭದ್ರತಾ ಪಡೆಯ ದಿಲ್ಲಿ ವಕ್ತಾರ ತಿಳಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)