ಈ ವರ್ಷದ ಹಜ್ ಯಾತ್ರೆಗೆ ಸ್ವದೇಶದ 60,000 ಜನರಿಗೆ ಅವಕಾಶ ನೀಡಿದ ಸೌದಿ ಅರೇಬಿಯ
ದುಬೈ: ಈಗಿನ ಕೊರೋನವೈರಸ್ ಬಿಕ್ಕಟ್ಟಿನ ದೃಷ್ಟಿಯಿಂದ ಈ ವರ್ಷದ ಹಜ್ ಯಾತ್ರೆಗೆ 60,000 ಜನರಿಗೆ ಅವಕಾಶ ನೀಡಲಾಗಿದೆ. ಎಲ್ಲರೂ ಸೌದಿ ನಿವಾಸಿಗಳೇ ಆಗಿರುತ್ತಾರೆ ಎಂದು ಸೌದಿ ಅರೇಬಿಯಾ ಹೇಳಿದೆ.
ಸೌದಿಯು ತನ್ನ ಸರಕಾರಿ ಸೌದಿ ಪ್ರೆಸ್ ಏಜೆನ್ಸಿಯಲ್ಲಿ ಶನಿವಾರ ಈ ಘೋಷಣೆ ಮಾಡಿದೆ. ಹಜ್ ಹಾಗೂ ಉಮ್ರಾ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅದು ಉಲ್ಲೇಖಿಸಿದೆ.
ಕಳೆದ ವರ್ಷದ ಹಜ್ ನಲ್ಲಿ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ 1,000 ಜನರಿಗೆ ಮಾತ್ರ ಹಜ್ ನಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿತ್ತು. ಈ ಬಾರಿಯ ಹಜ್ ಯಾತ್ರೆ ಜುಲೈ ಮಧ್ಯದಲ್ಲಿ ಆರಂಭವಾಗುತ್ತದೆ.
Next Story