ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಡು ಪ್ಲೆಸಿಸ್, ಆಸ್ಪತ್ರೆಗೆ ದಾಖಲು
ಅಬುಧಾಬಿಯಲ್ಲಿ ಪಿಎಸ್ ಎಲ್ ಪಂದ್ಯದ ವೇಳೆ ನಡೆದ ಘಟನೆ
Photo: twitter/@im_mano12
ಅಬುಧಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2021 ರ 19 ನೇ ಪಂದ್ಯದಲ್ಲಿ ಪೇಶಾವರ ಝಲ್ಮಿ ವಿರುದ್ಧ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುವಾಗ ಫೀಲ್ಡಿಂಗ್ ವೇಳೆ ಎಫ್ ಡು ಪ್ಲೆಸಿಸ್ ಸಹ ಆಟಗಾರ ಮುಹಮ್ಮದ್ ಹಸ್ನೈನ್ ಗೆ ಢಿಕ್ಕಿ ಹೊಡೆದಿದ್ದಾರೆ. ತಕ್ಷಣವೇ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪೇಶಾವರ ಝಲ್ಮಿ ತಂಡದ ಇನ್ನಿಂಗ್ಸ್ನ 7 ನೇ ಓವರ್ನಲ್ಲಿ ಬೌಂಡರಿ ತಡೆಯಲು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್ ಡು ಪ್ಲೆಸಿಸ್ ಡೈವ್ ಹೊಡೆದಿದ್ದಾರೆ. ಈ ವೇಳೆ ಎದುರಿನಿಂದ ಬಂದ ಪಾಕಿಸ್ತಾನ ಕ್ರಿಕೆಟಿಗ ಮುಹಮ್ಮದ್ ಹಸ್ನೈನ್ ಗೆ ಡಿಕ್ಕಿ ಹೊಡೆದರು. ಡು ಪ್ಲೆಸಿಸ್ ಅವರ ತಲೆ ಹಸ್ನೈನ್ ಅವರ ಕಾಲುಗಂಟಿಗೆ ಬಡಿದಾಗ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ನೆಲದ ಮೇಲೆ ಕುಸಿದು ಬಿದ್ದರು.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿನ ಸ್ಕ್ಯಾನ್ಗಳಿಗಾಗಿ ಪ್ಲೆಸಿಸ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಪಿಎಸ್ ಎಲ್ ಟ್ವೆಂಟಿ-20 ಟೂರ್ನಿಯು ಕೋವಿಡ್ ನಿಂದಾಗಿ ಮಾರ್ಚ್ ನಲ್ಲಿ ಅರ್ಧಕ್ಕೆ ಮೊಟಕುಗೊಂಡಿತ್ತು. ಇದೀಗ ಯುಎಇನಲ್ಲಿ ಜೂನ್ 9 ರಿಂದ ಪುನರಾರಂಭಗೊಂಡಿದ್ದು, ಪ್ಲೆಸಿಸ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
BREAKING - Faf du Plessis has been sent to hospital for a check-up after he collided with Mohammad Hasnain while fielding in PSL game.#FafduPlessis #PSL pic.twitter.com/RnT9sCPDkz
— AMAL (@i_auguzto) June 12, 2021
Praying to Almighty for the speedy recovery and a good health for #FafduPlessis
— An Indian (@real_farooque07) June 12, 2021
May he #getwellsoon ! pic.twitter.com/TT1JaTGFCH