varthabharthi


ರಾಷ್ಟ್ರೀಯ

ಭಾರತದಲ್ಲಿ 71 ದಿನಗಳ ನಂತರ ಕಡಿಮೆ ಕೇಸ್ , 80,834 ಹೊಸ ಕೋವಿಡ್ ಪ್ರಕರಣಗಳು

ವಾರ್ತಾ ಭಾರತಿ : 13 Jun, 2021

ಹೊಸದಿಲ್ಲಿ:  ಭಾರತದಲ್ಲಿ ಇಂದು  80,834 ಹೊಸ ಕೋವಿಡ್ -19 ಪ್ರಕರಣಗಳು  ವರದಿಯಾಗಿದೆ.  71 ದಿನಗಳ ನಂತರ  ಅತ್ಯಂತ ಕಡಿಮೆ ದೈನಂದಿನ ಪ್ರಕರಣ ಇದಾಗಿದೆ.  ದೈನಂದಿನ ಪಾಸಿಟಿವಿಟಿ ದರ ಇನ್ನೂ 4.25 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ರವಿವಾರ ತಿಳಿಸಿದೆ.

ಹೊಸ ಪ್ರಕರಣಗಳೊಂದಿಗೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 2,94,39,989 ಕ್ಕೆ ಏರಿದೆ.

3,303 ದೈನಂದಿನ ಸಾವುಗಳೊಂದಿಗೆ ಕೋವಿಡ್ 19 ಸಾವಿನ ಸಂಖ್ಯೆ 3,70,384 ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳು 10,26,159 ಕ್ಕೆ ಇಳಿದಿದ್ದರೆ, ರಾಷ್ಟ್ರೀಯ ಕೋವಿಡ್ -19 ಚೇತರಿಕೆ ಪ್ರಮಾಣವು ಶೇಕಡಾ 95.26 ಕ್ಕೆ ಸುಧಾರಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)