varthabharthi


ರಾಷ್ಟ್ರೀಯ

ಉತ್ತರಾಖಂಡ: ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಶ್ ನಿಧನ

ವಾರ್ತಾ ಭಾರತಿ : 13 Jun, 2021

photo: twitter

ಡೆಹರಾಡೂನ್: ಉತ್ತರಾಖಂಡದ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಶ್ ಅವರು ಹೊಸದಿಲ್ಲಿಯಲ್ಲಿ ರವಿವಾರ ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್  ಪಕ್ಷ ತಿಳಿಸಿದೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಉತ್ತರಾಖಂಡ ಪಕ್ಷದ ಉಸ್ತುವಾರಿ ದೇವೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ಶನಿವಾರ ನಡೆದಿದ್ದ ಸಭೆಯಲ್ಲಿ ಇಂದಿರಾ ಭಾಗವಹಿಸಿದ್ದರು.

ಇಂದಿರಾ ಹೃದಯೇಶ್ ಹಲವಾರು ಸಮುದಾಯಗಳ ಸೇವಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು. ಶಾಸಕರಾಗಿ ಪರಿಣಾಮಕಾರಿ ಛಾಪು ಮೂಡಿಸಿದವರು ಹಾಗೂ ಅವರು ಹೆಚ್ಚಿನ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಇಂದಿರಾ ಹೃದಯೇಶ್ ಅವರು ಉತ್ತರಾಖಂಡ್ ನ ಕಾಂಗ್ರೆಸ್ ನ ಪ್ರಬಲ ಕೊಂಡಿಯಾಗಿದ್ದರು. ಕೊನೆಯವರೆಗೂ ಅವರು ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗಾಗಿ ಅರ್ಪಿಸಿದ್ದರು. ಅವರ ಸಾಮಾಜಿಕ ಹಾಗೂ ರಾಜಕೀಯ ಕೊಡುಗೆಗಳು ಸ್ಫೂರ್ತಿಯಾಗಿವೆ ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)