varthabharthi


ಕರ್ನಾಟಕ

ಮೈಸೂರಿನಲ್ಲಿ ಮೂರು ತಲೆಯಿರುವ ಕರು ಜನನ: ಗ್ರಾಮಸ್ಥರಲ್ಲಿ ಅಚ್ಚರಿ

ವಾರ್ತಾ ಭಾರತಿ : 13 Jun, 2021

ಮೈಸೂರು,ಜೂ.13: ತಾಲೂಕಿನ ದಾಸನೂರು ಗ್ರಾಮದ ಮನೆಯೊಂದರಲ್ಲಿ ಮೂರು ತಲೆಯಿರುವ ಕರುವೊಂದು ಜನಿಸಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

ಗ್ರಾಮದ ರೈತ ಆನಂದ್ ಅವರ ಮನೆಯಲ್ಲಿ ಹಸುವೊಂದು ವಿಶೇಷ ಕರುವಿಗೆ ಜನ್ಮ ನೀಡಿದೆ. ಆದರೆ, ಮೂರು ತಲೆ ಹೊಂದಿರುವ ಈ ಕರು ಹುಟ್ಟಿದ ಕೆಲ ಹೊತ್ತಿನಲ್ಲೇ ಪ್ರಾಣ ಕಳೆದುಕೊಂಡಿದೆ.

ಈ ರೀತಿಯ ಕರು ಜನನವಾಗಿರುವುದನ್ನು ಕಂಡು ಆಶ್ಚರ್ಯಪಟ್ಟ ಮನೆಯವರು ಪಶು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಮನೆಗೆ ಆಗಮಿಸಲಿದ್ದು, ಕರುವನ್ನು ಪರೀಕ್ಷೆಗೊಳಪಡಿಸಲಿದ್ದಾರೆ. ಬಳಿಕ ಕರುವನ್ನು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಿದ್ದೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಸು ಆರೋಗ್ಯವಾಗಿದೆ. ನಾಟಿ ಹಸುವಿಗೆ ಹೈಬ್ರೀಡ್ ಕೃತಕ ಗರ್ಭಧಾರಣೆಗೆ ಇಂಜೆಕ್ಷನ್ ನೀಡಿದ ಸಂದರ್ಭದಲ್ಲಿ ಈ ರೀತಿ ವ್ಯತ್ಯಾಸಗಳಾಗುತ್ತವೆ ಎಂದು ಪಶು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)