varthabharthi


ಕರಾವಳಿ

ಪಡುಬಿದ್ರಿ: ತೈಲಬೆಲೆ ಏರಿಕೆ ವಿರೋಧಿಸಿ ವಿವಿಧ ಕಡೆಗಳಲ್ಲಿ ಪ್ರತಿಭಟನೆ

ವಾರ್ತಾ ಭಾರತಿ : 13 Jun, 2021

ಪಡುಬಿದ್ರಿ:  ತೈಲ ಬೆಲೆ ಏರಿಕೆ ವಿರುದ್ಧ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಕರೆ ನೀಡಿದ ಪ್ರತಿಭಟನೆಗೆ ಕಾಪು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಕೆಪಿಸಿಸಿ ಕೋರ್ಡಿನೇಟರ್ ನವೀನ್‍ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ, ವೈ. ಸುಕುಮಾರ್, ಅಬ್ದುಲ್ ಅಝೀಝ್ ಹೆಜಮಾಡಿ, ಯೂತ್‍ ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ರಮೀಝ್ ಹುಸೈನ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಅಬ್ದುಲ್ ರಹ್ಮಾನ್ ಕನ್ನಂಗಾರ್, ಕೇಶವ್ ಹೆಜಮಾಡಿ, ನವೀನ್ ಎನ್. ಶೆಟ್ಟಿ, ಶಫಿ ಎಂ.ಎಸ್, ಜ್ಯೋತಿ ಮೆನನ್, ಅಶೋಕ್ ಸಾಲ್ಯಾನ್, ಸುಧೀರ್ ಕರ್ಕೇರ ಹೆಜಮಾಡಿ, ಎಂ.ಎಸ್. ನಿಝಾಮ್ ಉಪಸ್ಥಿತರಿದ್ದರು.

ಹೆಜಮಾಡಿ: ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಕೇಂದ್ರ-ರಾಜ್ಯ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಹೆಜಮಾಡಿ ಗುಡ್ಡೆಅಂಗಡಿ ಪೆಟ್ರೋಲ್ ಪಂಪ್ ಎದುರು ಭಾನುವಾರ ಪ್ರತಿಭಟನೆ ನಡೆಯಿತು.

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಮೊಹಮ್ಮದ್ ಇಕ್ಬಾಲ್, ರೀನಾ ವಿನುತಾ ಡಿಸೋಜಾ, ಸುಧಾಕರ್ ಕೆ., ದೊಂಬ ಪೂಜಾರಿ, ನಿರ್ಮಲಾ, ಫರೀದಾ, ಕುಸುಮಾ ಸಾಲ್ಯಾನ್, ಮೊಹಮ್ಮದ್ ನಿಯಾಝ್, ಜ್ಯೋತಿ ಮೆನನ್, ಶಾಫಿ ಎಮ್‍ಎಸ್, ಇಬ್ರಾಹಿಂ ಸನಾ, ದೀಪಕ್ ಕೋಟ್ಯಾನ್, ಮೊಹಮ್ಮದ್ ಶರೀಫ್, ಮೊಹಮ್ಮದ್ ಸೂಫಿ, ದಿನೇಶ್ ಸಾಲ್ಯಾನ್, ನಿಝಾಮ್ ಉಪಸ್ಥಿತರಿದ್ದರು.

ಫಲಿಮಾರು: ಅಡ್ವೆ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪಲಿಮಾರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ   ಯಶವಂತ ಪೂಜಾರಿ, ಪಕ್ಷದ ಮುಖಂಡರಾದ ಜಿತೇಂದ್ರ ಪುರ್ಟಾಡೋ, ದಿನೇಶ್ ಕೋಟ್ಯಾನ್, ಶಿವರಾಮ ಪೂಜಾರಿ, ಅಬ್ದುಲ್ಲಾ, ಅರುಣ್, ಯೋಗಾನಂದ, ಗೋಪಾಲ ಪೂಜಾರಿ, ಶಶಿ ಅಡ್ವೆ, ಕೀರ್ತನ್ ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)