varthabharthi


ಕರಾವಳಿ

ಕಾಪು ಯುವ ಕಾಂಗ್ರೆಸ್‍ನಿಂದ ಆಹಾರದ ಕಿಟ್ ವಿತರಣೆ

ವಾರ್ತಾ ಭಾರತಿ : 13 Jun, 2021

ಕಾಪು : ಕಾಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ರವರ ಮಾರ್ಗದರ್ಶನದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮದಡಿ ರಾಜೀವ್ ಭವನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಿಸುವ ಲಾರಿ ಚಾಲಕರಿಗೆ ಪಾಂಗಾಳ ಹಾಗು ಮಲ್ಲಾರ್ ನಲ್ಲಿರುವ ಅಶ್ರಮಕ್ಕೆ ಕಾಪು ಕೂಪ್ಪಲಂಗಡಿ ಕಾಲೂನಿ ನಿವಾಸಿಗಳಿಗೆ ಅಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.

ಮಾಜಿ ಶಾಸಕರಾದ ವಿನಯ ಕುಮಾರ್ ಸೂರಕೆ ಮಾತನಾಡಿ ಕೊರೂನಾ ಲಾಕ್‍ಡೌನ್‍ನ ಸಂದರ್ಭದಲ್ಲಿ ಅತ್ಯುತ್ತಮ ಸಮಾಜಮುಖಿ ಕೆಲಸ ಕಾರ್ಯಗಳನ್ನು ಕ್ಯೆಗೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಿದ ಕಾಪು ಬ್ಲಾಕ್ ಯವ ಕಾಂಗ್ರೆಸ್‍ನ  ಕಾರ್ಯಕರ್ತರ  ಕಾರ್ಯ  ಶ್ಲಾಘನೀಯ. ಉಡುಪಿ ಜಿಲ್ಲೆಯೇ ಲೌಕ್ ಡೌನ್ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶ್ವಸಿಯಾಗಿ ಸಂಘಟನೆಯನ್ನು ಮುನ್ನಡೆಸುತಿರುವುದರಲ್ಲಿ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಮಂಚೂಣಿಯಲ್ಲಿದೆ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಉಪಾಧ್ಯಕ್ಷ ಸುಲಕ್ಷಣ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಮುದರಂಗಡಿ, ಕೀರ್ತಿ ಕುಮಾರ್ ಪಡುಬಿದ್ರಿ, ದೀಪ್ತಿ ಮನೋಜ್, ಸಮಿತಿ ಸದಸ್ಯರಾದ ಮುಝಮಿಲ್, ತೌಸೀರ್, ಶ್ರೀಧರ್ ಅಚಾರ್ಯ ಪಾದೆಬೆಟ್ಟು, ಪ್ರಶಾಂತ್ ಪಾದೆಬೆಟ್ಟು ಎನ್‍ಎಸ್‍ಯಐ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್,  ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಶರ್ಪುದ್ದೀನ್, ಕಾಂಗ್ರೆಸ್ ಮುಖಂಡರಾದ ಅಮೀರ್ ಕಾಪು, ಅಬ್ದುಲ್ ಇಲ್ಯಾಸ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)