varthabharthi


ಅಂತಾರಾಷ್ಟ್ರೀಯ

ಮೀನುಗಾರನನ್ನು ನುಂಗಿದ‌ ಬಳಿಕ ಹೊರಕ್ಕೆ ಉಗುಳಿದ ತಿಮಿಂಗಿಲ ಮೀನು !‌

ವಾರ್ತಾ ಭಾರತಿ : 13 Jun, 2021

ಸಾಂದರ್ಭಿಕ ಚಿತ್ರ 

ನ್ಯೂಯಾರ್ಕ್, ಜೂ. 13: ಆಳ ಸಮುದ್ರದಲ್ಲಿ ಸಿಗಡಿ ಮೀನುಗಾರಿಕೆ ನಡೆಸುತ್ತಿದ್ದಾಗ ತನ್ನನ್ನು ತಿಮಿಂಗಿಲವೊಂದು ಜೀವಂತ ನುಂಗಿ ಹಾಕಿದೆ ಎಂಬುದಾಗಿ ಮೀನುಗಾರರೊಬ್ಬರು ಹೇಳಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು ಸ್ವಲ್ಪ ಹೊತ್ತಿನ ಬಳಿಕ ಅದು ನನ್ನನ್ನು ಹೊರಗೆ ಉಗುಳಿತು, ಹಾಗಾಗಿ, ಈ ಕತೆಯನ್ನು ಹೇಳಲು ನನಗೆ ಸಾಧ್ಯವಾಯಿತು ಎಂದು ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.

‘‘ತಿಮಿಂಗಿಲದ ಮುಚ್ಚಿದ ಬಾಯಿಯ ಒಳಗೆ ನಾನು 30-40 ಸೆಕೆಂಡ್ಗಳ ಕಾಲ ಇದ್ದೆ. ಬಳಿಕ ಅದು ಸಮುದ್ರದ ಮೇಲ್ಮೈಗೆ ಬಂದು ನನ್ನನ್ನು ಹೊರಗೆ ಉಗುಳಿತು’’ ಎಂದು ಮೈಕಲ್ ಪ್ಯಾಕರ್ಡ್ ಹೇಳಿದ್ದಾರೆ.

‘‘ಹಂಪ್ಬ್ಯಾಕ್ ತಿಮಿಂಗಿಲ ನನ್ನನ್ನು ತಿನ್ನಲು ಯತ್ನಿಸಿತು. ನನಗೆ ಕೆಲವು ಗಾಯವಾಗಿದೆ. ಆದರೆ ಎಲುಬುಗಳು ಮುರಿದಿಲ್ಲ’’ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಮ್ಯಾಸಚೂಸಿಟ್ಸ್ ರಾಜ್ಯದ ಕರಾವಳಿಯ ಸಮುದ್ರದಲ್ಲಿ ಸಿಗಡಿ ಹಿಡಿಯಲು ಆಳಕ್ಕೆ ಮುಳುಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ‘ಕೇಪ್ ಕಾಡ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)