varthabharthi


ಅಂತಾರಾಷ್ಟ್ರೀಯ

ಚೀನಾದಲ್ಲಿ ಅನಿಲ ಪೈಪ್ ಲೈನ್ ಸ್ಫೋಟ; 12 ಸಾವು

ವಾರ್ತಾ ಭಾರತಿ : 13 Jun, 2021

ಹಾಂಕಾಂಗ್, ಜೂ. 13: ಮಧ್ಯ ಚೀನಾದ ಹುಬೈ ಪ್ರಾಂತದ ಶಿಯಾನ್ ಎಂಬ ನಗರದಲ್ಲಿ ಅನಿಲ ಪೈಪ್ಲೈನ್ ಸ್ಫೋಟಿಸಿ 12 ಮಂದಿ ಮೃತಪಟ್ಟಿದ್ದಾರೆ ಮತ್ತು 138 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಸರಕಾರಿ ಟಿವಿ ಸಿಸಿಟಿವಿ ರವಿವಾರ ವರದಿ ಮಾಡಿದೆ.

ಗಾಯಗೊಂಡವರ ಪೈಕಿ 37 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಸ್ಫೋಟದ ಬಳಿಕ ಸುಮಾರು 150 ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಬೆಳಗ್ಗೆ ಸುಮಾರು 6:30ಕ್ಕೆ ನಡೆದ ಸ್ಫೋಟದ ತೀವ್ರತೆಯಿಂದಾಗಿ ಆಹಾರ ಮಾರುಕಟ್ಟೆ ಕಟ್ಟಡವೊಂದು ಕುಸಿದಿದೆ. ಕಟ್ಟಡ ಕುಸಿಯುವಾಗ ಜನರು ಅದರಲ್ಲಿ ಬೆಳಗ್ಗಿನ ಉಪಹಾರ ಸೇವಿಸುತ್ತಿದ್ದರು ಹಾಗೂ ಕಿರಾಣಿ ಪದಾರ್ಥಗಳನ್ನು ಖರೀದಿಸುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)