varthabharthi


ಕ್ರೀಡೆ

ಫ್ರೆಂಚ್ ಓಪನ್: 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ ಜೊಕೊವಿಕ್

ವಾರ್ತಾ ಭಾರತಿ : 13 Jun, 2021

ಪ್ಯಾರಿಸ್: ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್  ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ರವಿವಾರ ನಡೆದ ಫೈನಲ್ ಫೈಟ್ ನಲ್ಲಿ ಜೊಕೊವಿಕ್ ಅವರು ಸ್ಟೆಫನೊಸ್ ಸಿಟ್ಸಿಪಾಸ್   ವಿರುದ್ಧ ಮೊದಲ  ಎರಡು  ಸೆಟ್ ನಲ್ಲಿ ಸೋತಿದ್ದರೂ ಬಳಿಕ ತಿರುಗೇಟು ನೀಡಿ 6-7 (6/8), 2-6, 6-3, 6-2, 6-4 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.  ಈ ಗೆಲುವಿನ ಮೂಲಕ ವೃತ್ತಿಜೀವನದಲ್ಲಿ 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಜೊಕೊವಿಕ್ ಅವರು ಸೆಮಿ ಫೈನಲ್ ನಲ್ಲಿ ಹಾಲಿ ಚಾಂಪಿಯನ್  ರಫೆಲ್ ನಡಾಲ್ ಅವರನ್ನು ಮಣಿಸಿ ಗಮನ ಸೆಳೆದಿದ್ದರು.

ನಾಲ್ಕನೇ ಸುತ್ತಿನ ಪಂದ್ಯದ ಬಳಿಕ 18 ಸೆಟ್ ಗಳನ್ನು ಆಡಿರುವ ಜೊಕೊವಿಕ್ ಮುಕ್ತ ಟೆನಿಸ್ ಯುಗದಲ್ಲಿ ಎರಡು ಬಾರಿ ಎಲ್ಲ 4 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)