varthabharthi


ರಾಷ್ಟ್ರೀಯ

ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮುಕುಲ್ ರಾಯ್ ಆಯ್ಕೆ ಸಾಧ್ಯತೆ

ವಾರ್ತಾ ಭಾರತಿ : 14 Jun, 2021

ಹೊಸದಿಲ್ಲಿ: ಇತ್ತೀಚೆಗೆ ಬಿಜೆಪಿಯಿಂದ ಟಿಎಂಸಿಗೆ ಮರಳಿರುವ  ಮುಕುಲ್ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಬಹುದು ಎಂದು ಮೂಲಗಳು ತಿಳಿಸಿವೆ. ಮುಕುಲ್ ರಾಯ್ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಾಗಿದ್ದರು.

ಹಿರಿಯ ಮುಖಂಡ ಮುಕುಲ್ ರಾಯ್ ಹಾಗೂ  ಅವರ ಪುತ್ರ ಸುಬ್ರಾನ್ಷು ರಾಯ್ ಅವರು ಶುಕ್ರವಾರ ಬಿಜೆಪಿಯನ್ನು ತ್ಯಜಿಸಿ ಮತ್ತೆ ಟಿಎಂಸಿಗೆ ಸೇರಿಕೊಂಡರು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ  ರಾಜ್ಯದ ಆಡಳಿತ ಪಕ್ಷದ ಇತರ ನಾಯಕರು ರಾಯ್ ಅವರನ್ನು ಪಕ್ಷಕ್ಕೆ ಮತ್ತೆ ಸ್ವಾಗತಿಸಿದರು.

ಬಿಜೆಪಿ ಪಕ್ಷದಲ್ಲಿ ರಾಯ್ ಅವರು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು

"ನನಗೆ ಪರಿಚಿತವಿರುವ  ಎಲ್ಲಾ ಮುಖಗಳನ್ನು ಮತ್ತೆ ನೋಡುವುದಕ್ಕೆ ಸಂತೋಷವಾಗಿದೆ" ಎಂದು ಟಿಎಂಸಿ ಸೇರಿದ ತಕ್ಷಣ ರಾಯ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)