ಸೌದಿಗೆ ಆಗಮಿಸುವವರು ಕೋವಿಡ್-19 ರೋಗ ನಿರೋಧಕತೆ ದತ್ತಾಂಶ ಸಲ್ಲಿಸಬೇಕು: ನಾಗರಿಕ ವಾಯುಯಾನ ಪ್ರಾಧಿಕಾರ
ರಿಯಾದ್,ಜೂ.19: ಸೌದಿ ಆರೇಬಿಯಕ್ಕೆ ಪ್ರಯಾಣಿಸುವ ಎಲ್ಲಾ ವಿದೇಶಿ ಪ್ರಯಾಣಿಕರು ಹಾಗೂ ಅವರ ಜೊತೆಗಾರರು ಸ್ವದೇಶದಿಂದ ನಿರ್ಗಮಿಸುವ ಮುನ್ನ ತಮ್ಮ ಕೊರೋನವೈರಸ್ ರೋಗನಿರೋಧಕ ದತ್ತಾಂಶದ ನೋಂದಣಿಯನ್ನು ಪೂರ್ಣ ಗೊಳಿಸಬೇಕೆಂದು ಸೌದಿ ಆರೇಬಿಯದ ನಾಗರಿಕ ವಾಯುಯಾನ ಪ್ರಾಧಿಕಾರವು ಗುರುವಾರ ಪ್ರಕಟಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಈ ಕ್ರಮದಿಂದಾಗಿ ವಿದೇಶಿ ಪ್ರಯಾಣಿಕರು ಸೌದಿ ಆರೇಬಿಯ ಪ್ರವೇಶಿಸುವ ಕುರಿತ ವಿಧಿ ವಿಧಾನಗಳನ್ನು ಪೂರ್ತಿಗೊಳಿಸಲು ಸುಗಮವಾಗಲಿದೆ ಹಾಗೂ ದೇಶವನ್ನು ಪ್ರವೇ ಶಿಸಲು ಅವರ ಕಾಯುವ ಅವಧಿಯನ್ನು ಕಡಿಮೆಗೊಳಿಸಲಿದೆ.
ಗಲ್ಫ್ ಸಹಕಾರ ಮಂಡಳಿಯ ಎಲ್ಲಾ ಪೌರರು, ನೂತನ ವೀಸಾ ಹೊಂದಿ ರುವವರು, ನಿವಾಸಿಗಳು ಹಾಗೂ ಅವರ ಜೊತೆಗಾರರು, ಲಸಿಕೆ ಹಾಕಿಸಿ ಕೊಂಡಿರುವವರು ಹಾಗೂ ಲಸಿಕೆ ಹಾಕಿಸಿಕೊಳ್ಳದವರು ಇವರೆಲ್ಲರಿಗೂ ನೂತನ ನಿಯಮ ಅನ್ವಯವಾಗುತ್ತದೆ.
ತನ್ನ ಪೌರರು ಹಾಗೂ ನಿವಾಸಿಗಳ ಸುರಕ್ಷತೆಯನ್ನು ಖಾತರಿಪಡಿಸುವ ಜೊತೆಗೆ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಸೌದಿ ಆರೇಬಿಯ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಎಸಿಎ ತಿಳಿಸಿದೆ.