ಯುಎಇ: ಗೋಲ್ಡನ್ ವೀಸಾ ಹೊಂದಿದವರಿಗೆ ವರ್ಕ್ ಪರ್ಮಿಟ್ ನೀಡುವ ಪ್ರಕ್ರಿಯೆಗೆ ಚಾಲನೆ
ದುಬೈ, ಜು.3: ಗೋಲ್ಡನ್ ವೀಸಾ ಹೊಂದಿದವರಿಗೆ ವರ್ಕ್ಪರ್ಮಿಟ್(ಕೆಲಸದ ಪರವಾನಿಗೆ) ನೀಡುವ ಕಾರ್ಯಕ್ಕೆ ಯುಎಇಯ ಮಾನವಸಂಪನ್ಮೂಲ ಮತ್ತು ಎಮಿರೈಟೇಷನ್ ಇಲಾಖೆ ಚಾಲನೆ ನೀಡಿದೆ ಎಂದು ವರದಿಯಾಗಿದೆ.
ಇಂತಹ ಪರ್ಮಿಟ್ ಗಳು 3 ಪ್ರಕರಣಗಳಲ್ಲಿ ಅಗತ್ಯವಾಗಿದೆ. 1. ಗೋಲ್ಡನ್ ವೀಸಾ ಪಡೆಯುವ ಸಂದರ್ಭ ನಿರುದ್ಯೋಗಿಗಳಾಗಿದ್ದು, ಈಗ ಉದ್ಯೋಗಿಯೊಬ್ಬರ ಬಳಿ ಕೆಲಸಕ್ಕೆ ಸೇರುವಾಗ, 2. ಉದ್ಯೋಗಿಯಾಗಿದ್ದು, ಈಗ ಬೇರೆಯವರ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವಾಗ, 3. ಗೋಲ್ಡನ್ ವೀಸಾ ಹೊಂದಿದವರ ವರ್ಕ್ ಪರ್ಮಿಟ್ ಮತ್ತು ಗುತ್ತಿಗೆ(ಒಪ್ಪಂದ)ವನ್ನು ಉದ್ಯೋಗದಾತರು ನವೀಕರಿಸಬಯಸಿದರೆ ವರ್ಕ್ಪರ್ಮಿಟ್ ಅಗತ್ಯವಿದೆ. ತಮ್ಮ ಪೋಷಕರ ರೆಸಿಡೆನ್ಸಿ ವೀಸಾದಡಿ ನೋಂದಾಯಿಸಲ್ಪಟ್ಟಿರುವ ಗೋಲ್ಡನ್ ವೀಸಾ ಹೊಂದಿದವರು ವರ್ಕ್ಪರ್ಮಿಟ್ಗೆ ಅರ್ಜಿ ಸಲ್ಲಿಸಿದಾಗಲೂ ಅದೇ ನಿಯಮ ಮತ್ತು ಪ್ರಕ್ರಿಯೆಯ ಅಗತ್ಯವಿದೆ.
ಗೋಲ್ಡನ್ ವೀಸಾ ಹೊಂದಿದ ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವಿನ ವರ್ಕ್ಪರ್ಮಿಟ್ ಹಾಗೂ ಗುತ್ತಿಗೆ , ಯುಎಇ ಕಾನೂನಿಗೆ ಒಳಪಟ್ಟು ಊರ್ಜಿತವಾಗಿರುತ್ತದೆ . ನಿಯಮಿತ ಶುಲ್ಕವೂ ಅನ್ವಯಿಸುತ್ತದೆ ಎಂದು ಯುಎಇ ಇಲಾಖೆ ಹೇಳಿದೆ.