ಜು.8ರಂದು ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ : ಹವಾಮಾನ ಇಲಾಖೆ
ಮಂಗಳೂರು, ಜು.5: ದ.ಕ. ಜಿಲ್ಲೆಯಲ್ಲಿ ಸೋಮವಾರ ಮೋಡ ಕವಿದ ಮತ್ತು ಬಿಸಿಲಿನ ವಾತಾವರಣವಿದ್ದರೂ ಕೂಡ ಅಲ್ಲಲ್ಲಿ ಕೆಲಕಾಲ ಸ್ವಲ್ಪಮಳೆಯಾಗಿದೆ.
ಆಕಾಶದಲ್ಲಿ ದಟ್ಟಕಪ್ಪುಮೋಡಗಳ ಚಲನೆ ಹೆಚ್ಚಾಗಿದೆ. ಆದಾಗ್ಯೂ ಹವಾಮಾನ ಇಲಾಖೆಯು ಜು.7ರವರೆಗೆ ಯೆಲ್ಲೋ ಅಲರ್ಟ್ ಮತ್ತು ಜು.8ರಂದು ಆರಂರ್ಜ್ ಅಲರ್ಟ್ ಘೋಷಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮಳೆಯು ಬಿರುಸು ಪಡೆಯುವ ಸಾಧ್ಯತೆಯಿದೆ.
ಸೋಮವಾರದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Next Story