ಕಿವೀಸ್ ಕ್ರಿಕೆಟ್ ಜಗತ್ತಿನ ಪ್ರಚಂಡರು
ಭೌಗೋಳಿಕವಾಗಿ ತಮಗೆ ನಿಕಟವಾಗಿರುವ, ಆದರೆ ನ್ಯೂಝಿಲ್ಯಾಂಡ್ ಆಟಗಾರರ ಬಗ್ಗೆ ತಾತ್ಸಾರ ಹೊಂದಿದ್ದ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಕಿವೀಸ್ ಆಟಗಾರರು ಫೈನಲ್ ತಲುಪಿರುವುದನ್ನು ನೋಡಲು ಚೆನ್ನಾಗಿರುತ್ತದೆ (1946ರಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ಟೆಸ್ಟ್ ಆಡಿದ ಬಳಿಕ ಆಸ್ಟ್ರೇಲಿಯನ್ ಕ್ರಿಕೆಟಿಗರು ಸುಮಾರು 27 ವರ್ಷಗಳ ಕಾಲ ಆಡಲು ನಿರಾಕರಿಸಿದ್ದರು). ಹಾಗೆಯೇ ಜನಸಂಖ್ಯಾ ಗಾತ್ರ, ಆರ್ಥಿಕ ಸಾಮರ್ಥ್ಯ, ಆಡಳಿತಾತ್ಮಕ ನಿಯಂತ್ರಣ ಹಾಗೂ ಇತರ ದೇಶಗಳ ಮೇಲೆ ಪ್ರಭಾವ ಬೀರಬಲ್ಲ ಮತ್ತು ಪ್ರಶ್ನಾತೀತವಾಗಿ ಕ್ರಿಕೆಟ್ ಜಗತ್ತಿನ ಸೂಪರ್ ಪವರ್ ಆಗಿರುವ ಭಾರತದ ಎದುರು ಕಿವೀಸ್ ಗೆಲುವು ಇನ್ನೂ ಹೆಚ್ಚು ಗಮನಾರ್ಹವಾದುದಾಗಿದೆ.
ಇಂದು ಭಾರತೀಯ ಕ್ರಿಕೆಟ್ ಅಭಿಮಾನಿಯಲ್ಲಿ ಜಾಗೃತಿಯನ್ನು ರೂಪಿಸುತ್ತಿದ್ದು, ಅದು ಟೆಲಿವಿಶನ್ ಪಂದ್ಯಗಳ ನೇರಪ್ರಸಾರವನ್ನು ಮನೆಯೊಳಕ್ಕೆ ತಂದಿದೆ. ಆದಾಗ್ಯೂ ನಾನು ದೊಡ್ಡವನಾಗುತ್ತಿದ್ದಾಗ ರೇಡಿಯೊ ಮಾತ್ರವೇ ಜಗತ್ತಿಗೆ ನನ್ನ ಕಿಟಕಿಯಾಗಿತ್ತು. ಬಿಬಿಸಿ ವರ್ಲ್ಡ್ ಸರ್ವಿಸ್‌ನ ಟಾಪ್ ಟ್ವೆಂಟಿ ರೇಡಿಯೊ ಕಾರ್ಯಕ್ರಮದಲ್ಲಿ ವಿಶ್ವಪ್ರಸಿದ್ಧ ಸಂಗೀತ ಗಾಯನ ತಂಡ ಬೀಟಲ್ಸ್‌ನ ಹಾಡನ್ನು ಆಲಿಸಿದ್ದೆ. ಅದೇ ರೇಡಿಯೊ ವಾಹಿನಿಯ ಟೆಸ್ಟ್ ಮ್ಯಾಚ್ ಸ್ಪೆಶಲ್ ಕಾರ್ಯಕ್ರಮದಲ್ಲಿ ನಾನು ಲಾರ್ಡ್ಸ್‌ನಲ್ಲಿ ನಡೆದ ‘ಟೆಸ್ಟ್ 100’ ಪಂದ್ಯಕೂಟದಲ್ಲಿ ಗ್ಯಾರಿ ಸೋಬರ್ಸ್‌ನ ಪ್ರತಿಯೊಂದು ಬ್ಯಾಟಿಂಗ್ ಹೊಡೆತವನ್ನು ಫಾಲೋ ಮಾಡಿದ್ದೆ.
1966ರಲ್ಲಿ ನಾನು 8 ವರ್ಷದವನಾಗಿದ್ದೆ. ಮೂರು ವರ್ಷಗಳ ಆನಂತರ ಮೂರು ಟೆಸ್ಟ್ ಸರಣಿಗಳನ್ನು ಆಡಲು ನ್ಯೂಝಿಲ್ಯಾಂಡ್ ಭಾರತ ಪ್ರವಾಸ ಕೈಗೊಂಡಿತ್ತು. ಆಗ ಅಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ಕ್ರಿಕೆಟ್ ಪಂದ್ಯದ ವೀಕ್ಷಕವಿವರಣೆಯನ್ನು ನಾನು ಫಾಲೋ ಮಾಡಿದ್ದೆ. ಆ ಕುರಿತ ಯಾವುದೇ ನೆನಪುಗಳು ನನ್ನಲ್ಲಿ ಈಗ ಉಳಿದಿಲ್ಲ. ಆದರೆ 1973ರ ಬೇಸಿಗೆಯಲ್ಲಿ ಕಿವೀಸ್ ಕ್ರಿಕೆಟಿಗರು ನನ್ನ ಮನದಾಳದಲ್ಲಿ ಸ್ಪಷ್ಟವಾದ ಪಡಿಯಚ್ಚನ್ನು ಮೂಡಿಸಿದ್ದರು. ಶಾಲಾ ಹುಡುಗನಾಗಿದ್ದಾಗ ನನ್ನ ಶಾಲೆಯ ಫಸ್ಟ್ ಇಲೆವೆನ್ ತಂಡಕ್ಕಾಗಿ ಆಡಲು ಫೆಬ್ರವರಿಯಿಂದ ಎಪ್ರಿಲ್ ತನಕ ಪ್ರತಿ ರವಿವಾರ ಆಡುತ್ತಿದ್ದೆ. ಬೇಸಿಗೆಯ ರಜಾದಿನಗಳು ಆರಂಭಗೊಳ್ಳುವಾಗ ನನ್ನ ಊರಿನಲ್ಲಿ ಕ್ರಿಕೆಟ್ ಆಡಲು ತುಂಬಾ ಸೆಕೆಯಾಗುತ್ತಿತ್ತು. ಆದರೆ ಕನಿಷ್ಠ ಪಕ್ಷ ಆಗ ನಾನು ಕ್ರಿಕೆಟ್ ಪಂದ್ಯಗಳನ್ನು ಫಾಲೋ ಮಾಡುತ್ತಿದ್ದೆ. ಅದು ಕೂಡಾ ಅತ್ಯುನ್ನತ ಮಟ್ಟದವುಗಳನ್ನು ಅಂದರೆ ರೇಡಿಯೊ ಮೂಲಕ.
1973ರ ಬೇಸಿಗೆಯಲ್ಲಿ ಗ್ಲೆನ್ ಟರ್ನರ್ ಅವರು ಮೇ ತಿಂಗಳ ಅಂತ್ಯಕ್ಕೆ ಮುನ್ನ ಇಂಗ್ಲಿಷ್ ಬೇಸಿಗೆ ಋತುವಿನಲ್ಲಿ ಸಾವಿರ ಪ್ರಥಮ ದರ್ಜೆ ರನ್‌ಗಳನ್ನು ಗಳಿಸುವ ಮೂಲಕ ಕಳೆದ ಮೂವತ್ತೈದು ವರ್ಷಗಳಲ್ಲಿ ಆ ಸಾಧನೆ ಮಾಡಿದ ಮೊದಲ ದಾಂಡಿಗ ಎನಿಸಿದರು. ನ್ಯೂಝಿಲ್ಯಾಂಡ್‌ನ ಆಟಗಾರರಾಗ ಟರ್ನರ್, ವೂರ್ಸೆಸ್ಟರ್‌ಶೈರ್ ತಂಡಕ್ಕಾಗಿ ತಾನು ಆಡಿದ್ದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಇಷ್ಟು ರನ್‌ಗಳನ್ನು ಗಳಿಸಿದ್ದರು. ಆನಂತರ ಬಿಬಿಸಿ ವರ್ಲ್ಡ್ ಸರ್ವಿಸ್ ರೇಡಿಯೊ ‘ಸ್ಯಾಟರ್‌ಡೇ ಸ್ಪೋರ್ಟ್ಸ್ ಸ್ಪೆಶಲ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿತ್ತು. ಈ ಕಾರ್ಯಕ್ರಮವು ಶನಿವಾರ ಸಂಜೆ 5 ಗಂಟೆಯಿಂದ ರಾತ್ರಿ 11:15ರವರೆಗೆ ಅಬಾಧಿತವಾಗಿ ನಡೆಯುತ್ತಿತ್ತು. ಆದರೆ ಸುದ್ದಿಗಳ ಪ್ರಸಾರಕ್ಕೆ ಮಾತ್ರ ಬಿಡುವು ತೆಗೆದುಕೊಳ್ಳುತ್ತಿತ್ತು. ಸತತವಾಗಿ ಶನಿವಾರಗಳಂದು ನಾನು ಟರ್ನರ್ ಅವರ ಹಲವಾರು ಇನ್ನಿಂಗ್ಸ್ ಆಟಗಳನ್ನು ಆಲಿಸಿದ್ದೆ. ಬಿಬಿಸಿ ಪ್ರತಿ ದಿನ ಪ್ರಸಾರ ಮಾಡುತ್ತಿದ್ದ ‘ಡೈಲಿ ಸ್ಪೋರ್ಟ್ಸ್ ರೌಂಡ್‌ಅಪ್’ ಕಾರ್ಯಕ್ರಮದಲ್ಲಿ 15 ನಿಮಿಷಗಳ ಕ್ರೀಡಾ ಸುದ್ದಿಗಳಲ್ಲಿ ಕಳೆದ 24 ತಾಸುಗಳಲ್ಲಿ ಮಹತ್ವದ ಕ್ರೀಡಾ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಪ್ರಸಾರ ಮಾಡಲಾಗುತ್ತಿತ್ತು.
‘1000 ರನ್ಸ್ ಬಿಫೋರ್ ದಿ ಎಂಡ್ ಆಫ್ ಮೇ’ (ಮೇ ತಿಂಗಳ ಕೊನೆಯೊಳಗೆ ಸಾವಿರ ರನ್‌ಗಳು) ಅತ್ಯಂತ ಮಹತ್ವದ ಕ್ರಿಕೆಟ್ ಪಟ್ಟಿಯಾಗಿತ್ತು.
1973ರ ಪಟ್ಟಿಯಲ್ಲಿ ಡಬ್ಲು.ಜಿ. ಗ್ರೇಸ್, ವ್ಯಾಲ್ಲಿ ಹ್ಯಾಮಂಡ್ ಹಾಗೂ ಡಾನ್ ಬ್ರಾಡ್ಮನ್ ಸೇರಿದಂತೆ ಆರು ಮಂದಿ ಆಟಗಾರರಿದ್ದರು. ನ್ಯೂಝಿಲ್ಯಾಂಡ್‌ನ ಬ್ಯಾಟ್ಸ್ ಮನ್ ಆಗಿದ್ದ ಗ್ಲೆನ್ ಟರ್ನರ್ ಕೂಡಾ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದುದು ಹಲವರ ಮೆಚ್ಚುಗೆಗೆ ಕಾರಣವಾಗಿತ್ತು ಮತ್ತು ಭಾರತದ ಶಾಲಾಬಾಲಕನಾಗಿದ್ದ ನನ್ನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತ್ತು.
ಮೇ ತಿಂಗಳಲ್ಲಿ ವೂರ್ಸಸ್ಟರ್‌ಶೈರ್ ತಂಡದಲ್ಲಿ ಆಡಿ ತನ್ನ ಛಾಪನ್ನು ಮೂಡಿಸಿದ ಬಳಿಕ ಗ್ಲೆನ್ ಟರ್ನರ್ ನ್ಯೂಝಿಲ್ಯಾಂಡ್ ತಂಡವನ್ನು ಸೇರಿಕೊಂಡರು. ಆನಂತರ ಅವರು ಮೂರು ಟೆಸ್ಟ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡರು. 1973ರ ಮೊದಲ ಪಂದ್ಯವನ್ನು ಅವರು ಜೂನ್ ತಿಂಗಳ 7ರಿಂದ 13ರವರೆಗೆ ನಾಟ್ಟಿಂಗ್‌ಹ್ಯಾಮ್‌ನಲ್ಲಿ ಆಡಿದರು. ಆ ಪಂದ್ಯವನ್ನು ರೇಡಿಯೊದಲ್ಲಿ ಆಲಿಸಲು ರೋಮಾಂಚನವಾಗುತ್ತಿತ್ತು ಹಾಗೂ ಕೀಡಾಂಗಣದಲ್ಲಿ ಅದನ್ನು ವೀಕ್ಷಿಸುವುದು ಇನ್ನೂ ಹೆಚ್ಚು ರೋಮಾಂಚಕವಾಗುತ್ತಿತ್ತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ನ್ಯೂಝಿಲ್ಯಾಂಡ್ ಮುಂದೆ 478 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಇಂಗ್ಲೆಂಡ್ ಒಡ್ಡಿತ್ತು. ನ್ಯೂಝಿಲ್ಯಾಂಡ್ ತಂಡದಿಂದ ಪ್ರತಿಯೊಂದು ರನ್ ಬೆನ್ನಟ್ಟುವಿಕೆಯನ್ನು ನಾನು ಮನೆಯ ರೇಡಿಯೊದಲ್ಲಿ ವಾಲ್ಯೂಮ್ ಕಡಿಮೆ ಮಾಡಿ ಕೇಳುತ್ತಿದ್ದೆ. ರಾತ್ರಿ 9 ಗಂಟೆಯ ಆನಂತರ ನನ್ನ ಕುಟುಂಬಿಕರು ನಿದ್ರಿಸಿದ ಬಳಿಕ ರಿಸೀವರ್‌ಗೆ ತೀರಾ ಸಮೀಪವಾಗಿ ನನ್ನ ಕಿವಿಗಳನ್ನು ಇರಿಸಿ ವೀಕ್ಷಕ ವಿವರಣೆ ಕೇಳುತ್ತಿದ್ದೆ. ರಾತ್ರಿ 11 ಗಂಟೆಗೆ ದಿನದ ಪಂದ್ಯಾಟ ಮುಗಿಯುವವರೆಗೂ ವೀಕ್ಷಕ ವಿವರಣೆಯನ್ನು ಕೇಳುತ್ತಾ ಇರುತ್ತಿದ್ದೆ.
ಈ ಐತಿಹಾಸಿಕ ಟೆಸ್ಟ್ ಪಂದ್ಯ ನಡೆದು ಹೆಚ್ಚುಕಮ್ಮಿ ಆರ್ಧ ಶತಮಾನ ಕಳೆದಿದೆ. ಆದರೆ ಸ್ಕೋರ್‌ಪಟ್ಟಿಯನ್ನು ನೋಡದೆಯೇ ನಾನು ಈಗಲೂ ಆ ಟೆಸ್ಟ್ ಪಂದ್ಯದ ಕ್ಯಾಪ್ಟನ್ ಬೆವಾನ್ ಕೊಂಗ್ಡ್ಡನ್, ಆಫ್ ಸ್ಪಿನ್ನಿಂಗ್ ಆಲ್‌ರೌಂಡರ್ ವಿಕ್ಟರ್ ಪೋಲ್ಲಾರ್ಡ್ ಇಬ್ಬರು ಶತಕಗಳನ್ನು ಬಾರಿಸಿರುವುದನ್ನು ಹೇಳಬಲ್ಲೆ. ಅವರು ವ್ಯತಿರಿಕ್ತವಾದ ಶೈಲಿಯೊಂದಿಗೆ ಬ್ಯಾಟಿಂಗ್ ಮಾಡಿದ್ದು ನನಗೆ ನೆನಪಿದೆ. ಕೊಂಗ್ಡ್ಡನ್ ಹೆಚ್ಚು ಸಾಂಪ್ರದಾಯಿಕ ವಿ ಶೈಲಿಯಲ್ಲಿ ಆಟವಾಡಿದರೆ, ಪೊಲ್ಲಾರ್ಡ್ ಬೌಂಡರಿ ಲೈನ್‌ನೆಡೆಗೆ ಬಾಲ್‌ಗಳನ್ನು ಹೊಡೆಯುತ್ತಿದ್ದುದನ್ನು ಅಷ್ಟೇಕೆ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದುದು ಈಗಲೂ ನನಗೆ ನೆನಪಿದೆ.
ಇದಕ್ಕೂ ಎರಡು ಬೇಸಿಗೆಗಳ ಮೊದಲು, ಭಾರತವು ನಲ್ವತ್ತು ವರ್ಷಗಳ ಪ್ರಯತ್ನದ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಪರಾಜಯಗೊಳಿಸಿತ್ತು. ದುರದೃಷ್ಟವಶಾತ್, 1971ರ ಆಗಸ್ಟ್ ತಿಂಗಳ ಅಂತ್ಯದಲ್ಲಿ ಓವಲ್‌ಟೆಸ್ಟ್ ಪಂದ್ಯ ನಡೆದ ಸಂದರ್ಭ ನಾನು ವಸತಿ ಶಾಲೆಯಲ್ಲಿದ್ದೆ. ಆಗ ನನಗೆ ಪಂದ್ಯವನ್ನು ರೇಡಿಯೊದಲ್ಲಿ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಮಾರನೇ ದಿನದ ಸುದ್ದಿಪತ್ರಿಕೆಗಳಲ್ಲಿ ಓದುವುದರಲ್ಲಿಯೇ ನಾನು ಸಂತೃಪ್ತನಾಗಿರಬೇಕಾಗುತ್ತಿತ್ತು. ಇನ್ನೊಂದೆಡೆ, 1973ರಲ್ಲಿ ನಡೆದ ಇಂಗ್ಲೆಂಡ್-ನ್ಯೂಝಿಲ್ಯಾಂಡ್ ಪಂದ್ಯದಲ್ಲಿ ನಾನು ಪ್ರತಿಯೊಂದು ಬಾಲ್ ಎಸೆತವನ್ನು ಕೂಡಾ ಅನುಸರಿಸುತ್ತಲೇ ಇದ್ದೆ ಹಾಗೂ ಆ ಪಂದ್ಯವನ್ನು ಹೇಗೆ ಆಡಲಾಯಿತು ಎಂಬ ಬಗ್ಗೆ ತುಂಬಾ ಸ್ಪಷ್ಟವಾದ ನೆನಪುಗಳಿವೆ.
ಭಾರತದ ಕ್ರಿಕೆಟ್ ಅಭಿಮಾನಿಗಳು ನ್ಯೂಝಿಲ್ಯಾಂಡ್ ಆಟಗಾರರ ಬಗ್ಗೆ ದೀರ್ಘಸಮಯದಿಂದಲೂ ಹೆಚ್ಚು ಒಲವನ್ನು ಹೊಂದಿರಲಿಲ್ಲ. ಮೊದಲನೆಯದಾಗಿ, ಟೆಸ್ಟ್ ಸ್ಕೋರ್‌ನಲ್ಲಿ ಅತ್ಯಂತ ಕನಿಷ್ಠ ಗಳಿಕೆ ಮಾಡಿದ ಅಪಕೀರ್ತಿಯನ್ನು ನ್ಯೂಝಿಲ್ಯಾಂಡ್ ತಂಡ ಹೊಂದಿದೆ. ಎರಡನೆಯದಾಗಿ ನಾವು ನಮ್ಮ ಚೊಚ್ಚಲ ಸಾಗರೋತ್ತರ ಟೆಸ್ಟ್ ಸರಣಿಯನ್ನು ಗೆದ್ದುದು ನ್ಯೂಝಿಲ್ಯಾಂಡ್‌ನಲ್ಲೇ ಆಗಿದೆ. ಆದಾಗ್ಯೂ, ಗ್ಲೆನ್‌ಟರ್ನರ್ ಅವರು ಮೇ ತಿಂಗಳ ಅಂತ್ಯದ ಮೊದಲು 1 ಸಾವಿರ ರನ್‌ಗಳ ಗಳಿಕೆಯ ಸಾಧನೆಯಲ್ಲಿ ಗ್ರೇಸ್, ಹ್ಯಾಮಂಡ್ ಹಾಗೂ ಬ್ರಾಡ್ಮನ್ ಅವರನ್ನು ಹೇಗೆ ಸರಿಗಟ್ಟಿದರೆಂಬುದನ್ನು ಕೇಳಿದ ಬಳಿಕ ಹಾಗೂ ಟ್ರೆಂಟ್ ಬ್ರಿಜ್ ಟೆಸ್ಟ್ ಪಂದ್ಯದಲ್ಲಿ ಕೊಂಗ್ಡನ್ ಹಾಗೂ ಪೊಲ್ಲಾರ್ಡ್ ಅವರು 478 ರನ್‌ಗಳ ಬೆನ್ನಟ್ಟಿದ್ದುದನ್ನು ನಿಕಟವಾಗಿ ಫಾಲೋ ಮಾಡಿದ ಬಳಿಕ ನಾನು ಕಿವೀಸ್ ಕ್ರಿಕೆಟಿಗರನ್ನು ಲಘುವಾಗಿ ಪರಿಗಣಿಸುವುದನ್ನು ನಿಲ್ಲಿಸಿದ್ದೆ.
ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲ್ಯಾಂಡಿಗರು ಲೆಕ್ಕಕ್ಕಿಲ್ಲದವರು ಎಂಬ ಮಿಥ್ಯೆಯನ್ನು ರಿಚರ್ಡ್ ಹ್ಯಾಡ್ಲಿ ಅವರ ಮಾರಣಾಂತಿಕ ಬೌಲಿಂಗ್ ದಾಳಿಯು ನುಚ್ಚುನೂರು ಮಾಡಿತು. ಗವಾಸ್ಕರ್, ವಿಶ್ವನಾಥ್ ಹಾಗೂ ವೆಂಗ್‌ಸರ್ಕಾರ್ ಸೇರಿದಂತೆ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಹೊಡೆದುರುಳಿಸಿದ ಹ್ಯಾಡ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ 8.3-0-23-7 ಅವರ ವಿಕೆಟ್ ಸಾಧನೆಯಾಗಿತ್ತು. ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಯುವ ಆಟಗಾರ ಹ್ಯಾಡ್ಲಿ ಆಗ ಕ್ರಿಕೆಟ್ ಅಭಿಮಾನಿಗಳ ತಾರೆಯಾಗಿಬಿಟ್ಟರು. 1973ರ ಇಂಗ್ಲಿಷ್ ಬೇಸಿಗೆಯಲ್ಲಿ ಗ್ಲೆನ್ ಟರ್ನರ್ ಹಾಗೂ ಬೆವಾನ್ ಕೊಂಗ್ಡೊನ್ ಅರ್ಧಶತಕಗಳನ್ನು ಬಾರಿಸುವ ಮೂಲಕ ಗಮನಸೆಳೆದಿದ್ದರು.
ಇತರ ದೇಶಗಳ ಕ್ರಿಕೆಟಿಗರಾಗಲಿ, ಕ್ರಿಕೆಟ್ ಅಭಿಮಾನಿಗಳಿಂದಾಗಲಿ ರಿಚರ್ಡ್ ಹ್ಯಾಡ್ಲಿ ಪಡೆದಷ್ಟು ಗೌರವವನ್ನು ಇತರ ಯಾವುದೇ ಕಿವೀಸ್ ಆಟಗಾರರು ಪಡೆದಿಲ್ಲ. ಹ್ಯಾಡ್ಲಿ ಶ್ರೇಷ್ಠ ಬೌಲರ್ ಆಗಿರುವಂತೆಯೇ, ಅವರ ತಲೆಮಾರಿಗಿಂತ ಕಿರಿಯ ವಯಸ್ಸಿನವರಾದ ಮಾರ್ಟಿನ್ ಕ್ರೋವ್, ಅವರ ಕಾಲದಲ್ಲಿ ವಿಶ್ವಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದರು.
ಕ್ರೋವ್ ಕೂಡಾ ಅಸಾಧಾರಣ ಕ್ಯಾಪ್ಟನ್ ಆಗಿದ್ದು, ಅವರ ವ್ಯೆಹಾತ್ಮಕ ಕೌಶಲ್ಯತೆಯು 1992ರ ವಿಶ್ವಕಪ್‌ನಲ್ಲಿ ಪ್ರದರ್ಶಿತವಾಗಿತ್ತು.
ಓದುಗರು ಬಹುಶಃ ಊಹಿಸಿರಬಹುದಾದ, ಹಾಗೆಯೇ ಈ ಅಂಕಣವನ್ನು ಬರೆಯಲು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ನ ಗೆಲುವು ಪ್ರೇರಣೆಯಾಗಿದೆ. ಭೌಗೋಳಿಕವಾಗಿ ತಮಗೆ ನಿಕಟವಾಗಿರುವ, ಆದರೆ ನ್ಯೂಝಿಲ್ಯಾಂಡ್ ಆಟಗಾರರ ಬಗ್ಗೆ ತಾತ್ಸಾರ ಹೊಂದಿದ್ದ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಕಿವೀಸ್ ಆಟಗಾರರು ಫೈನಲ್ ತಲುಪಿರುವುದನ್ನು ನೋಡಲು ಚೆನ್ನಾಗಿರುತ್ತದೆ (1946ರಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ಟೆಸ್ಟ್ ಆಡಿದ ಬಳಿಕ ಆಸ್ಟ್ರೇಲಿಯನ್ ಕ್ರಿಕೆಟಿಗರು ಸುಮಾರು 27 ವರ್ಷಗಳ ಕಾಲ ಆಡಲು ನಿರಾಕರಿಸಿದ್ದರು). ಹಾಗೆಯೇ ಜನಸಂಖ್ಯಾ ಗಾತ್ರ, ಆರ್ಥಿಕ ಸಾಮರ್ಥ್ಯ, ಆಡಳಿತಾತ್ಮಕ ನಿಯಂತ್ರಣ ಹಾಗೂ ಇತರ ದೇಶಗಳ ಮೇಲೆ ಪ್ರಭಾವ ಬೀರಬಲ್ಲ ಮತ್ತು ಪ್ರಶ್ನಾತೀತವಾಗಿ ಕ್ರಿಕೆಟ್ ಜಗತ್ತಿನ ಸೂಪರ್ ಪವರ್ ಆಗಿರುವ ಭಾರತದ ಎದುರು ಕಿವೀಸ್ ಗೆಲುವು ಇನ್ನೂ ಹೆಚ್ಚು ಗಮನಾರ್ಹವಾದುದಾಗಿದೆ.
ನ್ಯೂಝಿಲ್ಯಾಂಡ್‌ನ ಕ್ರಿಕೆಟಿಗರಿಗೆ ನನ್ನ ಗೌರವ ನಮನದ ಭಾಗವಾಗಿ ಆ ದೇಶದ ಸಾರ್ವಕಾಲಿಕ ಶ್ರೇಷ್ಠ ಇಲೆವೆನ್ ತಂಡವನ್ನು ನಾನು ಆಯ್ಕೆ ಮಾಡುವೆ. ಗ್ಲೆನ್ ಟರ್ನರ್ ಜೊತೆಗೆ ಭಾರತಕ್ಕೆ ಎರಡು ಬಾರಿ ಪ್ರವಾಸ ಮಾಡಿ, ಉತ್ಕೃಷ್ಟ ಬ್ಯಾಟಿಂಗ್ ನಿರ್ವಹಣೆ ಪ್ರದರ್ಶಿಸಿದ್ದ ಎಡಗೈ ಬ್ಯಾಟ್ಸ್‌ಮನ್ ಬರ್ಟ್ ಸ್ಯುಟ್‌ಕ್ಲಿಫ್ ಓಪನ್ ಇನ್ನಿಂಗ್ಸ್ ಆಟಗಾರರು. ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಕ್ರೋವ್ ಮೂರನೇ ಹಾಗೂ ನಾಲ್ಕನೇ ಆಟಗಾರರಾಗಿರುವರು ಮತ್ತು ನಾಯಕತ್ವವನ್ನು ಇವರಿಬ್ಬರಿಗೆ ಪರ್ಯಾಯವಾಗಿ ನೀಡಬೇಕಾಗಿದೆ. ಹಳೆಯ ತಲೆಮಾರಿನ ಎಡಗೈ ಆಟಗಾರ, ಬ್ಯಾಟಿಂಗ್ ತಜ್ಞ ಮಾರ್ಟಿನ್ ಡೊನೆಲ್ಲಿ ಐದನೇ ಆಟಗಾರನಾಗಲಿ. ಮಾರ್ಟಿನ್ ಡೊನೆಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲ್ಯಾಂಡ್‌ಗಾಗಿ, ಕೇಂಬ್ರಿಜ್ ವಿರುದ್ಧ ಆಕ್ಸಫರ್ಡ್‌ಗಾಗಿ, ಇಂಗ್ಲೆಂಡ್ ವಿರುದ್ಧ ಡೊಮಿನಿಯನ್ಸ್ ಪರವಾಗಿ ಲಾರ್ಡ್ಸ್‌ನಲ್ಲಿ ಶತಕ ಗಳನ್ನು ಸಿಡಿಸಿದ್ದರು.
ಆರು, ಏಳು ಹಾಗೂ ಎಂಟು ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೆಂದರೆ ವಿಕೆಟ್ ಕೀಪರ್ ಬ್ರೆಂಡನ್ ಮೆಕಲಮ್ ಹಾಗೂ ನಿಧಾನಗತಿಯ ಎಡಗೈ ಬೌಲರ್ ಡೇನಿಯಲ್ ವೆಟ್ಟೋರಿ ಕೂಡಾ ಜನಪ್ರಿಯರಾಗಿದ್ದು ಭಾರತೀಯ ಯುವ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಆನಂತರದ ಆಟಗಾರ ರಿಚರ್ಡ್ ಹ್ಯಾಡ್ಲಿ. ಆತ ವೇಗದ ಬೌಲರ್ ಮಾತ್ರವಲ್ಲದೆ ಅತ್ಯುತ್ತಮ ಬಾಟ್ಸ್ ಮನ್ ಕೂಡಾ ಹೌದು.
ಇನ್ನುಳಿದ ಮೂರು ಕ್ರಮಾಂಕಗಳೆಲ್ಲವೂ ಸ್ವಿಂಗ್ ಬೌಲರ್‌ಗಳ ಪಾಲಾಗುತ್ತದೆ. ನ್ಯೂಝಿಲಾಂಡ್ ಅಂತೂ ಉನ್ನತ ಗುಣಮಟ್ಟದ ಸ್ವಿಂಗ್ ಬೌಲರ್‌ಗಳನ್ನು ತಯಾರಿಸುವಲ್ಲಿ ನಿಪುಣನಾಗಿದೆ. ಕನಿಷ್ಠ ಒಂದು ಸ್ಥಾನವು ಎಡಗೈ ಬೌಲರ್‌ಗೆ ದೊರೆಯಬೇಕಾಗಿದೆ. 1973ರ ತಂಡದಲ್ಲಿದ್ದ ರಿಚರ್ಡ್ ಬೌಲ್ಟ್ ಈ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದರೂ ನಾನು ಟ್ರೆಂಟ್ ಬೌಲ್ಟ್ ಅವರನ್ನು ಆಯ್ಕೆ ಮಾಡುತ್ತೇನೆ. ಬೌಲ್ಟ್ ತನ್ನ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಸದೆಬಡಿಯಲು ಬಲಗೈ ಸ್ವಿಂಗ್ ಆಟಗಾರ ಟಿಮ್ ಸೌಥಿ ಅತ್ಯುತ್ತಮ ಆಯ್ಕೆಯಾಗುತ್ತದೆ. ಕೊನೆಯ ಸ್ಥಾನವನ್ನು ತುಂಬಲು ನಾನು ಶೇನ್ ಬಾಂಡ್‌ನನ್ನು ಆಯ್ಕೆ ಮಾಡುತ್ತೇನೆ. ತಾಸಿಗೆ 100 ಮೈಲು ವೇಗದಲ್ಲಿ ಬಾಲ್ ಅನ್ನು ಸ್ವಿಂಗ್ ಮಾಡುವ ಆತನ ಸಾಮರ್ಥ್ಯಕ್ಕೆ ವಕಾರ್ ಯೂನಿಸ್ ಮಾತ್ರವೇ ಸರಿಸಾಟಿಯಾಗಿದ್ದಾರೆ.
ನನ್ನ ಆಯ್ಕೆಯ ಕಿವೀಸ್ ಇಲೆವೆನ್ ತಂಡ ಹೀಗಿದೆ.
ಬ್ಯಾಟಿಂಗ್ ಕ್ರಮಾಂಕ: 1.ಗ್ಲೆನ್ ಟರ್ನರ್ 2. ಬರ್ಟ್ ಸಟ್‌ಕ್ಲಿಫ್ 3. ಕೇನ್ ವಿಲಿಯಮ್ಸನ್ (ಕ್ಯಾಪ್ಟನ್) 4. ಮಾರ್ಟಿನ್ ಕ್ರೋವ್ (ಉಪ ಕ್ಯಾಪ್ಟನ್) 5. ಮಾರ್ಟಿನ್ ಡೊನೆಲ್ಲಿ 6. ಬ್ರೆಂಡನ್ ಮೆಕಲಮ್ (ವಿಕೆಟ್ ಕೀಪರ್) 7. ಡೇನಿಯಲ್ ವೆಟ್ಟೋರಿ 8. ರಿಚರ್ಡ್ ಹ್ಯಾಡ್ಲಿ 9.ಟ್ರೆಂಟ್ ಬೌಲ್ಟ್ 10.ಶೇನ್ ಬಾಂಡ್ 11. ಟಿಮ್ ಸೌಥಿ.
ಭಾರತ ಉಪಖಂಡದಲ್ಲಿ ಸಾರ್ವಕಾಲಿಕ ಭಾರತೀಯ ಇಲೆವೆನ್ ತಂಡದ ವಿರುದ್ಧದ ಕಲ್ಪಿತ ಸ್ಪರ್ಧೆಯಲ್ಲಿ ಕಿವೀಸ್‌ಗಳು ಕುಂಭ್ಳೆ, ಮಂಕಡ್ ಹಾಗೂ ಅಶ್ವಿನ್ ವಿರುದ್ಧ ಆಡುವುದನ್ನು ಯೋಚಿಸುವುದೇ ಒಂದು ಅದ್ಭುತವಾಗಿದೆ. ಜುಲೈನಲ್ಲಿ ಮೋಡ ಮುಸುಕಿದ ಆಗಸದ ಕೆಳಗೆ ಪಂದ್ಯ ನಡೆಯುವುದಿದ್ದರೆ ಗವಾಸ್ಕರ್, ತೆಂಡುಲ್ಕರ್ ಹಾಗೂ ಅವರ ಬಳಗದ ಉತ್ಕೃಷ್ಟತೆಯನ್ನು ಪಡೆಯುವಂತೆ ನಾನು ಹ್ಯಾಡ್ಲಿ, ಬಾಂಡ್ ಮತ್ತವರ ಬಳಗವನ್ನು ಬೆಂಬಲಿಸುವೆ.