varthabharthi


ಸಿನಿಮಾ

ಇಂದ್ರಜಿತ್ ಆಡಿಯೋ ಬಿಡುಗಡೆ ಮಾಡಲಿ: ನಟ ದರ್ಶನ್‌

ವಾರ್ತಾ ಭಾರತಿ : 17 Jul, 2021

ಮೈಸೂರು, ಜು.17: ‘ನನಗೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವ ಇಂದ್ರಜಿತ್ ಗಂಡಸಾಗಿದ್ದರೆ, ಅವರಪ್ಪನಿಗೆ ಹುಟ್ಟಿದ್ದರೆ ಬಿಡುಗಡೆ ಮಾಡಲಿ ಎಂದು ನಟ ದರ್ಶನ್ ಸವಾಲು ಹಾಕಿದ್ದಾರೆ.

ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿರುವ ಅವರ ತೋಟದಲ್ಲಿ ಶನಿವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಇಂದ್ರಜಿತ್ ಗಂಡಸಾಗಿದ್ದರೆ ನನಗೆ ಸಂಬಂಧಿಸಿದ ಆಡಿಯೋ ರಿಲೀಸ್ ಮಾಡಲಿ. ನನ್ನ ಬಗ್ಗೆ ಗಂಡಸ್ತನದ ಬಗ್ಗೆ ಇಂದ್ರಜಿತ್ ಮಾತನಾಡಿದ್ದಾರೆ. ನನ್ನ ಅನಕ್ಷರಸ್ತ ಎಂದು ಹೇಳಿದ್ದಾರೆ. ನಾನು ಎಸೆಸೆಲ್ಸಿ ಓದಿದ್ದೇನೆ. ಚೆನೈ ಸಿನೆಮಾ ತರಬೇತಿ ಸಂಸ್ಥೆಯಲ್ಲಿ ಪ್ರಮಾಣ ಪತ್ರ ಪಡೆದಿದ್ದೇನೆ ಎಂದು ತಿರುಗೇಟು ನೀಡಿದರು.

ನಾನು ಇಂದ್ರಜಿತ್ ಏನೆ ಅಂದರೂ ಸುಮ್ಮನಿದ್ದೆ. 25 ಕೋಟಿ.ರೂ. ವಿಚಾರ ದೊಡ್ಡಮನೆ (ಡಾ.ರಾಜ್ ಕುಮಾರ್) ಕಡೆಗೆ ಹೋಗುತ್ತಿದೆ. ಹಾಗಾಗಿ ನಾನು ಮಾತನಾಡಲೇಬೇಕಿದೆ. ದೊಡ್ಡ ಮನೆ ಋಣ ನಮ್ಮ ಮೇಲಿದೆ. ದೊಡ್ಡಮನೆಯ ಅನ್ನವನ್ನು ನಮ್ಮ ತಂದೆ, ನಾನು ತಿಂದಿದ್ದೇವೆ. ಅವರ ಬಗ್ಗೆ ಯಾರೇ ಮಾತನಾಡಿದರೂ ನಾನು ಸುಮ್ಮನೆ ಇರುವುದಿಲ್ಲ ಎಂದು ದರ್ಶನ್ ಎಚ್ಚರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)