ದುಬೈ: ಟೀಮ್ 501 ಕ್ರಿಕೆಟ್ ಪಂದ್ಯಾವಳಿ; ಡಿ ಗ್ರೂಪ್ ವಿಟ್ಲ- ಎ ತಂಡಕ್ಕೆ ಪ್ರಶಸ್ತಿ
ದುಬೈ, ಜು.18: ಟೀಮ್ 501 ಆಯೋಜಿಸಿದ ಕ್ರಿಕೆಟ್ ಪಂದ್ಯಾಟವು ಅಬು ಹೈಲ್ ದುಬೈಯ ಸ್ಕೌಟ್ ಮಿಷನ್ ಗ್ರೌಂಡ್ ನಲ್ಲಿ ಜು.15ರಂದು ಜರುಗಿತು.
ಪಂದ್ಯಾವಳಿಯಲ್ಲಿ ಡಿ ಗ್ರೂಪ್ ವಿಟ್ಲ- ಎ ತಂಡವು ಪ್ರಶಸ್ತಿ ಜಯಿಸಿದರೆ, ಉಬಾರ್ ಫ್ರೆಂಡ್ಸ್ ತಂಡ ರನ್ನರ್ ಅಪ್ ಆಯಿತು.
ಉಳಿದಂತೆ ಡಿ ಗ್ರೂಪ್ ವಿಟ್ಲ- ಬಿ ತಂಡ ತೃತೀಯ, ಮಂಗಳೂರು ಫ್ರೆಂಡ್ಸ್ ತಂಡ 4ನೇ ಸ್ಥಾನಿಯಾದವು.
ಡಿ ಗ್ರೂಪ್ ತಂಡದ ಮುನೀರ್ ಕಂಡಿಗ ಸರಣಿ ಶ್ರೇಷ್ಠ ಹಾಗೂ ಉತ್ತಮ ಬ್ಯಾಟ್ಸಮನ್ ಆಗಿ ಉಬಾರ್ ಫ್ರೆಂಡ್ಸ್ ತಂಡದ ಶಾಹಿನ್, ಉತ್ತಮ ಬೌಲರ್ ಆಗಿ ಆಸ್ವಾರ್ ಕೊಯಿಲ ಮತ್ತು ಮುಆಝ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಹಮದ್ ನವಾಝ್ (DIB BANK ), ಅಬ್ದುಲ್ಲಾ (ಸ್ಮಾರ್ಟ್ ರೂಟ್ ಟೆಕ್ನಾಲಜಿಸ್ ), ಆಸಿಫ್ (ಸ್ಟಾರ್ ಕಿಲ್ಲರ್ ಮೆನ್ಸ್ ಫ್ಯಾಶನ್ಸ್ ), ಅಲ್ ಹಿಬಾತ್ ನ ಝುಬೈರ್, ಪಂದ್ಯಕೂಟದ ವ್ಯವಸ್ಥಾಪಕರಾಗಿದ್ದ ಫಾರೂಕ್ ವಗ್ಗ, ಝಮೀರ್ ಸಜಿಪ ಮತ್ತು ಜೋಯಲ್ ಮಡಂತ್ಯಾರ್ ಉಪಸ್ಥಿತರಿದ್ದರು. ವೀಕ್ಷಕ ವಿಶ್ಲೇಷಕರಾಗಿ ಅಸದುಲ್ಲಾ ಮತ್ತು ಅಶ್ರಫ್ ಪೆರುವಾಯಿ ಸಹಕರಿಸಿದರು.
ಟೀಮ್ 501 ನ ರಿಝ್ವಾನ್ ವಂದಿಸಿದರು.
ಈ ಪಂದ್ಯಾಕೂಟದ ಪ್ರಾಯೋಜಕರಾಗಿ ಸ್ಮಾರ್ಟ್ ರೂಟ್ ಟೆಕ್ನಾಲಜಿಸ್ ಮಂಗಳೂರು, ಸ್ಟಾರ್ ಕಿಲ್ಲರ್ ಮೆನ್ಸ್ ಫ್ಯಾಶನ್ ದುಬೈ, ಅಲ್ ಹಿಬಾತ್ ರೋಸ್ಟರಿ ದುಬೈ, ನಜಮ್ ಅಲ್ ಶಹಾಮ ಗ್ಯಾರೇಜ್ ಶಾರ್ಜಾ, ಮತ್ತು ವಾಸಿತ್ ಸ್ಪೋರ್ಟ್ಸ್ ಶಾರ್ಜಾ ಸಹಕಾರ ನೀಡಿತು.