varthabharthi


ಕ್ರೀಡೆ

ಗಾಯದ ಸಮಸ್ಯೆ:ಇಂಗ್ಲೆಂಡ್ ಸರಣಿಯಿಂದ ಹೊರಗುಳಿದ ಅವೇಶ್ ಖಾನ್

ವಾರ್ತಾ ಭಾರತಿ : 21 Jul, 2021

ಹೊಸದಿಲ್ಲಿ: ಡರ್ಹಾಮ್ ನಲ್ಲಿ ಮಂಗಳವಾರ ಕೌಂಟಿ ಇಲೆವೆನ್ ವಿರುದ್ಧ  ಭಾರತದ ಅಭ್ಯಾಸ ಪಂದ್ಯದ ಆರಂಭಿಕ ದಿನದಂದು ಎಡಗೈ ಹೆಬ್ಬೆರಳು ಮುರಿತದಿಂದಾಗಿ ಭಾರತದ ಯುವ ವೇಗದ ಬೌಲರ್ ಅವೇಶ್ ಖಾನ್ ಹೊರಗುಳಿದಿದ್ದಾರೆ. ಈ ಮೂಲಕ ಖಾನ್ ಅವರ ಇಂಗ್ಲೆಂಡ್ ಪ್ರವಾಸ ಹಠಾತ್ತನೆ ಕೊನೆಯಾಗುವ ಸಾಧ್ಯತೆ ಎದುರಾಗಿದೆ.

ಕೆಲವು ಆಟಗಾರರು ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದಿದ್ದರಿಂದ ಕಡ್ಡಾಯವಾಗಿ ಪ್ರತ್ಯೇಕವಾಗುಳಿದ ಕಾರಣ ಬಲಗೈ ವೇಗದ ಬೌಲರ್ ಖಾನ್ ಕೌಂಟಿ ತಂಡವನ್ನು ಪ್ರತಿನಿಧಿಸಿದ್ದರು.

ಮೀಸಲು ಆಟಗಾರನಾಗಿರುವ ಅವೇಶ್ ಖಾನ್ ಗಾಯದಿಂದಾಗಿ ಸಾಕಷ್ಟು ಸಮಯದವರೆಗೆ ಹೊರಗುಳಿಯಬಹುದು. ಅವೇಶ್ ಈ ಸರಣಿಯಲ್ಲಿ ಇನ್ನು ಮುಂದೆ ಭಾಗವಹಿಸುವ ಸಾಧ್ಯತೆಯಿಲ್ಲ. ಇದು ಹೆಬ್ಬೆರಳು ಮುರಿತ. ಅವರು ಕನಿಷ್ಠ ಒಂದು ತಿಂಗಳಾದರೂ ಬೌಲಿಂಗ್ ಮಾಡುವುದಿಲ್ಲ . ಇನ್ನೂ ಮೂರು ದಿನಗಳಲ್ಲಿ ಚಿತ್ರ ಸ್ಪಷ್ಟವಾಗಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಮಂಗಳವಾರ ಭೋಜನವಿರಾಮದ ನಂತರದ ಖಾನ್ ತಮ್ಮ 10 ನೇ ಓವರ್‌ನ ಅಂತಿಮ ಎಸೆತವನ್ನು ಬೌಲಿಂಗ್ ಮಾಡುವಾಗ ಗಾಯಗೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)