ಜು. 23ರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಮಂಗಳೂರು, ಜು. 22: ಇಲ್ಲಿನ 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಭಗವತಿನಗರ ಮತ್ತು 11ಕೆವಿ ಪ್ರಗತಿನಗರ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಮೆಸ್ಕಾಂನಿಂದ ಹಮ್ಮಿಕೊಳ್ಳಲಾಗಿದೆ.
ಇದರಿಂದ ಜು.23ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಪ್ರಗತಿ ಸರ್ವಿಸ್ ಸ್ಟೇಷನ್, ಪಿವಿಎಸ್ ಕಲಾಕುಂಜ, ಬೆಸೆಂಟ್ ಕಾಲೇಜು, ಸಿಟಿ ಪಾಯಿಂಟ್, ಶಾರದಾ ವಿದ್ಯಾಲಯ, ಭಗವತಿನಗರ, ಕಟ್ಟೆಮಾರ್, ಡೊಂಗರಕೇರಿ, ವೆಂಕಟರಮಣ ಟೆಂಪಲ್, ಕೆನರಾ ಶಾಲೆ, ಗಣಪತಿ ಮಂದಿರ, ಹೋಂಡ ಶೋರೂಂ, ಸತ್ಯಶಾಯಿ ನಸಿರ್ಂಗ್ ಹೋಂ, ಓಶಿಯನ್ ಪರ್ಲ್ ಹೊಟೇಲ್, ಅಯೋಧ್ಯ ಹೊಟೇಲ್, ಸುಧೀಂದ್ರ ಹೊಟೇಲ್, ಮಾನಸ ಟವರ್, ಪಿ.ವಿ.ಎಸ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ಅದೇ ರೀತಿ 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಪಾಂಡೇಶ್ವರ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಜು.24ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎ.ಬಿ. ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಮಹಾಲಿಂಗೇಶ್ವರ ಟೆಂಪಲ್, ಅಮೃತನಗರ, ರೋಸಾರಿಯೋ ಚರ್ಚ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಸೌತ್ವಾರ್ಫ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಆ ಪ್ರಯುಕ್ತ ಜು.25ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹ್ಯಾಮಿಲ್ಟನ್ ಸರ್ಕಲ್, ಡಿ.ಸಿ.ಆಫೀಸ್, ಸೈಂಟ್ ಆನ್ಸ್, ನೀರೇಶ್ವಲ್ಯ ರೋಡ್, ಗೂಡ್ ಶೆಡ್ ರಸ್ತೆ, ಸಂಜೆವಾಣಿ, ಬದ್ರಿಯಾ ರೋಡ್, ಧಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾ ಗುತ್ತದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.