ಕ್ವಾರಂಟೈನ್ ಮುಕ್ತ ಸ್ಥಳಗಳಿಗೆ ವಿಶೇಷ ಪ್ರಯಾಣ ದರ ಘೋಷಿಸಿದ ಎಮಿರೇಟ್ಸ್
ದುಬೈ, ಜು.22: ಸುಮಾರು 40 ಕ್ವಾರಂಟೈನ್ ಮುಕ್ತ ಸ್ಥಳಗಳಿಗೆ ವಿಮಾನದಲ್ಲಿ ಪ್ರಯಾಣಿಸಲು ಬೇಸಿಗೆ ರಜೆ ವಿಶೇಷ ಯೋಜನೆ ರೂಪಿಸಿರುವುದಾಗಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಘೋಷಿಸಿದೆ .
ಇಸ್ತಾನ್‌ಬುಲ್‌ನಂತಹ ಪ್ರಸಿದ್ಧ ಪ್ರವಾಸೀ ತಾಣಗಳಿಗೆ ಇಕಾನಮಿ ವರ್ಗದ ಪ್ರಯಾಣಿಕರಿಗೆ 1,695 ದಿರ್ಹಮ್, ಬ್ಯುಸಿನೆಸ್ ವರ್ಗದ ಪ್ರಯಾಣದರ 10,985 ದಿರ್ಹಮ್, ವಿಯೆನ್ನಾಗೆ ಇಕಾನಮಿ ವರ್ಗದಲ್ಲಿ ಪ್ರಯಾಣದರ 2,185 ದಿರ್ಹಮ್, ಬ್ಯುಸಿನೆಸ್ ವರ್ಗದ ಪ್ರಯಾಣದರ 10,895 ದಿರ್ಹಮ್, ಫುಕೆಟ್‌ಗೆ ಕ್ರಮವಾಗಿ 1,995 ಮತ್ತು 6,995 ದಿರ್ಹಮ್, ಕಸಬ್ಲಾಂಕಗೆ ಕ್ರಮವಾಗಿ 1,995 ಮತ್ತು 10,005 ದಿರ್ಹಮ್, ಲಾಸ್‌ಏಂಜಲಿಸ್‌ಗೆ 3,335 ಮತ್ತು 19,555 ದಿರ್ಹಮ್, ಮಿಯಾಮಿಗೆ 3,695 ಮತ್ತು 18,555 ದಿರ್ಹಮ್ ಪ್ರಯಾಣದರ ನಿಗದಿಯಾಗಿದೆ. 2021ರ ಜುಲೈ 22ರಿಂದ 31ರವರೆಗೆ ಈ ಪ್ಯಾಕೇಜ್ ಜಾರಿಯಲ್ಲಿರುತ್ತದೆ. ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಬಹುದು ಎಂದು ಎಮಿರೇಟ್ಸ್ ಸಂಸ್ಥೆ ಹೇಳಿದೆ.
Next Story