ಅಬುದಾಭಿ: ಉದ್ಯಮ ಸ್ಥಾಪನೆ ಶುಲ್ಕದಲ್ಲಿ ಶೇ.90ರಷ್ಟು ಕಡಿತ
photo: twitter/@MohamedBinZayed
ಅಬುದಾಭಿ ,ಜು.25: ನೂತನ ಉದ್ಯಮಗಳ ಸ್ಥಾಪನೆಗಾಗಿನ ನೋಂದಣಿ ವೆಚ್ಚದಲ್ಲಿ ಶೇ.90ರಷ್ಟು ಕಡಿತ ಮಾಡಲು ಅಬುದಾಭಿ ಆಡಳಿತ ನಿರ್ಧರಿಸಿದೆ. ಎಮಿರೇಟ್ನಲ್ಲ ಪ್ರಾದೇಶಿಕವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಈ ಕ್ರಮ ಕೈಗೊಂಡಿರುವುದಾಗಿ ಅದು ಹೇಳಿದೆ.
ಉದ್ಯಮಗಳ ಸ್ಥಾಪನೆ ಗಾಗಿನ ಪರಿಷ್ಕೃತ ನೋಂದಣಿ ಶುಲ್ಕ ದರವುಮಂಗಳವಾರದಿಂದ ಜಾರಿಗೆ ಬರಲಿದೆಯೆಂದು ಅದು ಹೇಳಿದೆ.
ಯುಎಇನ ಏಳು ಏಮಿರೇಟ್ಗಳಲ್ಲೊಂದಾದ ಅಬುದಾಭಿಯು ಹೊಸ ಉದ್ಯಮ ಚಟುವಟಿಕೆಗಳನ್ನು ತನ್ನೆಡೆಗೆ ಆಕರ್ಷಿಸುವ ಪ್ರಯತ್ನವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.
‘‘ಅಬುದಾಭಿ ಎಮಿರೇಟ್ ನಲ್ಲಿ ಉದ್ಯಮ ಸಂಸ್ಥಾಪನೆ ಶುಲ್ಕವನ್ನು 1 ಸಾವಿರ ದಿರ್ಹಂಗಳಿಗೆ (272 ಡಾಲರ್)ಗಳಿಗೆ ಇಳಿಸಲಾಗಿದೆ ಎಂದು ಅಬುದಾಭಿ ಆಡಳಿತದ ಮಾಧ್ಯಮ ಕಾರ್ಯಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story