18 ತಿಂಗಳುಗಳ ಬಳಿಕ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಪ್ರವಾಸಿಗಳಿಗೆ ಅವಕಾಶ
ರಿಯಾದ್, ಜು.30: ಕೊರೋನ ಸೋಂಕು ಹರಡದಂತೆ ನಿರ್ಬಂಧ ಜಾರಿಯಾದ 18 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ರವಿವಾರ ತನ್ನ ಗಡಿಗಳನ್ನು ಪ್ರವಾಸಿಗಳಿಗೆ ತೆರೆಯಲು ಸೌದಿ ಅರೆಬಿಯಾನಿರ್ಧರಿಸಿದೆ ಎಂದು ವರದಿಯಾಗಿದೆ.
ಪ್ರಯಾಣಕ್ಕೂ ಮೊದಲು ಪಡೆದಿರುವ ನೆಗೆಟಿವ್ ಪಿಸಿಆರ್ ಪರೀಕ್ಷೆಯ ವರದಿ, ಆಕ್ಸ್ಫರ್ಡ್/ಆಸ್ಟ್ರಝೆನೆಕ, ಫೈಝರ್/ಬಯೊಎನ್ಟೆಕ್ ಅಥವಾ ಮೊಡೆರ್ನಾ ಲಸಿಕೆಯ 2 ಡೋಸ್, ಅಥವಾ ಜಾನ್ಸನ್ ಆ್ಯಂಡ್ ಜಾನ್ಸನ್ನ ಒಂದು ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರುವ 49 ದೇಶಗಳ( ಕೆಲವು ಯುರೋಪಿಯನ್ ದೇಶಗಳು, ಅಮೆರಿಕ ಮತ್ತು ಚೀನಾ) ನಾಗರಿಕರು ಸೌದಿ ಅರೆಬಿಯಾ ಪ್ರವೇಶಿಸಲು ಅವಕಾಶವಿದೆ.
ಚೀನಾದ ಸಿನೋಫಾರ್ಮ ಅಥವಾ ಸಿನೊವ್ಯಾಕ್ ಲಸಿಕೆ ಪಡೆದವರಾಗಿದ್ದರೆ 3 ಡೋಸ್ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು ಎಂದು ಸೌದಿ ಅರೆಬಿಯಾ ಹೇಳಿದೆ.
ತೈಲೇತರ ಆದಾಯ ಹೆಚ್ಚಿಸಲು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಸಲು ದೇಶವನ್ನು ಆಕರ್ಷಕ ಪ್ರವಾಸೀ ತಾಣವನ್ನಾಗಿ ರೂಪಿಸುವ ಉದ್ದೇಶ ಅಲ್ಲಿನ ಆಡಳಿತದ್ದಾಗಿದೆ.
Next Story