ಕೋಟ: ಮನೆಗೆ ನುಗ್ಗಿ ಸೊತ್ತು ಕಳವು
ಕೋಟ, ಜು.30: ನೆಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿ ಮೇ 20ರಿಂದ ಜು.29ರ ಮಧ್ಯಾವಧಿಯಲ್ಲಿ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ನೀಲಕಂಠ ಕರಬ ಎಂಬವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಒಳಗಿದ್ದ 5 ಹಿತ್ತಾಳೆಯ ಚಂಬು, 15 ಹಿತ್ತಾಳೆಯ ಕೊಡ ಪಾನ, 10 ಗಂಟೆಗಳು, 4 ದೀಪಗಳು, ದೇವರ ಮೂರ್ತಿಯ ಬೆಳ್ಳಿಯ ಕವಚ, ಚಿನ್ನದ ಪದಕ, ಕಬ್ಬಿಣದ ಗೃಹಪಯೋಗಿ ವಸ್ತುಗಳನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 38,200ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story