ಸೀ ಫುಡ್ ಬೈಯರ್ಸ್ ಅಸೋಸಿಯೇಷನ್ ಬಂದರ್ : 30ನೇ ವಾರ್ಷಿಕ ಮಹಾಸಭೆ
ಮಂಗಳೂರು : ಸೀ ಫುಡ್ ಬೈಯರ್ಸ್ ಅಸೋಸಿಯೇಷನ್ ಬಂದರ್, ಮಂಗಳೂರು ಇದರ 30ನೇ ವಾರ್ಷಿಕ ಮಹಾಸಭೆಯು ಅಬ್ರಾರ್ ಸಂಸ್ಥೆಯ ಮಾಲಕರಾದ ಬಿಎಸ್ ಬಶೀರ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಬಾಂಬೆ ಲಕ್ಕಿ ಹೋಟೆಲ್ ಹಾಲ್ ನಲ್ಲಿ ನಡೆಯಿತು.
ಸೀ ಫುಡ್ ಬೈಯರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಎಸ್.ಎಂ. ಭಾಷಾ ಅವರು ಮೂರನೇ ಬಾರಿಗೆ ಪುನರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜೆ.ಎಸ್.ಎಸ್. ಜಾಫರ್, ಕಾರ್ಯದರ್ಶಿಯಾಗಿ ಮುಹಮ್ಮದ್ ಹುಸೈನ್, ಕೋಶಾಧಿಕಾರಿಯಾಗಿ ಎಚ್.ಎಮ್.ಎಫ್. ಮುಹಮ್ಮದ್ ಮುಸ್ತಕ್ ಹಾಗು 20 ಮಂದಿ ಕಾರ್ಯಕಾರಿ ಸದ್ಯಸರಾಗಿ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.
Next Story